×
Ad

ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Update: 2016-06-29 23:52 IST

ಬೆಂಗಳೂರು, ಜೂ. 29: 2016-17ನೆ ಸಾಲಿನ ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದ ಯುವಕ- ಯುವತಿಯರು ಸೂಕ್ಷ್ಮ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ತೇಜಿಸಿ ಅವರನ್ನು ಮೊದಲ ಪೀಳಿಗೆ ಉದ್ಯಮಿಗಳನ್ನಾಗಿ ಮಾಡಲು ಗ್ರಾಮೀಣ ಪ್ರದೇಶದ ಅರ್ಹ ಯುವಕ- ಯುವತಿಯರಿಂದ ಸಾಲ ಸೌಲಭ್ಯಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಅವಕಾಶವಿರುತ್ತದೆ. ಯಾವುದಾದರೂ ಬೇರೆ ಯೋಜನೆಗಳಲ್ಲಿ ಉದ್ದಿಮೆ ಸ್ಥಾಪನೆಗೆ ಸಾಲ ಸೌಲಭ್ಯ ಪಡೆದಿದ್ದಲ್ಲಿ ಈ ಯೋಜನೆಯಲ್ಲಿ ಅವಕಾಶ ಇರುವುದಿಲ್ಲ. ಅರ್ಜಿಗಳನ್ನು ಜು.16ರೊಳಗಾಗಿ ಆನ್‌ಲೈನ್ (ಛಿಞಛಿಜ.ಚ್ಟ.್ಞಜ್ಚಿ.ಜ್ಞಿ) ಮುಖಾಂತರ ಸಲ್ಲಿಸುವುದು. ಹೆಚ್ಚಿನ ವಿವರಗಳಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಂಗಳೂರು ನಗರ ಜಿಲ್ಲೆ ರಾಜಾಜಿನಗರ, ಕೈಗಾರಿಕಾ ವಸಾಹತು, ರಾಜಾಜಿನಗರ, ಬೆಂಗಳೂರು-10 ಕಚೇರಿಯನ್ನು ಅಥವಾ ದೂ.ಸಂ. 080- 2350 1478 ಅನ್ನು ಸಂಪರ್ಕಿಸಬಹುದು ಎಂದು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News