ಜುಲೈ 1ರಂದು ಟಿಬೆಟಿಯನ್ ಧರ್ಮಗುರು ದಲೈಲಾಮಾ ಮುಂಡಗೋಡಕ್ಕೆ
Update: 2016-06-30 17:54 IST
ಮುಂಡಗೋಡ, ಜೂ.30: ನೊಬೆಲ್ ಪ್ರಶಸ್ತಿ ಪುರಸ್ಕೃತ ಟಿಬೆಟಿಯನ್ ಧರ್ಮಗುರು ದಲೈಲಾಮಾ ಜುಲೈ 1ರಂದು ಇಲ್ಲಿಯ ಟಿಬೆಟಿಯನ್ ಕಾಲನಿಗೆ ಆಗಮಿಸಲಿದ್ದಾರೆ.
ಜೂನ್ 30ರಂದು ಗೋವಾ ವಿಮಾನ ನಿಲ್ದಾಣದಿಂದ ಕಾರವಾರಕ್ಕೆ ಆಗಮಿಸಲಿದ್ದು, ಅಂದು ಅಲ್ಲಿಯೇ ವಾಸ್ತವ್ಯ ಹೂಡುವರು. ಜುಲೈ 1ರಂದು ಬೆಳಗಿನ ಜಾವ ಟಿಬೇಟಿಯನ್ ಕಾಲನಿಗೆ ಆಗಮಿಸಲಿದ್ದಾರೆ. ನಂತರ ಎಂಟು ದಿನಗಳ ಕಾಲ ದಲೈಲಾಮಾ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಇಲ್ಲಿನ ಬೌದ್ಧಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಭಿಕ್ಕುಗಳಿಗೆ ಬೌದ್ಧದೀಕ್ಷೆ ನೀಡಲಿದ್ದು, ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲಿದ್ದಾರೆ.
ಜುಲೈ 6ರಂದು ದಲೈಲಾಮಾರ ಜನ್ಮದಿನವಿದ್ದು, ಈ ಬಾರಿಯ ಜನ್ಮದಿನವನ್ನು ಇಲ್ಲಿಯೇ ಆಚರಿಸಿಕೊಳ್ಳುತ್ತಿರುವುದು ವಿಶೇಷ. ಪೊಲೀಸ್ ಇಲಾಖೆ ದಲೈಲಾಮಾರಿಗೆ ಭದ್ರತೆ ನೀಡಲು ಸಜ್ಜಾಗಿದೆ. ಜಿಲ್ಲೆಯ ವಿವಿಧೆಡೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.