×
Ad

ಮಹತ್ವದ ಕಾಯ್ದೆಗಳ ಅನುಷ್ಠಾನಕ್ಕೆ ಕ್ರಮ: ಸಚಿವ ಕಾಗೋಡು

Update: 2016-06-30 23:16 IST

  ಸಾಗರ, ಜೂ.30: ಅರಣ್ಯಹಕ್ಕು ಕಾಯ್ದೆ, ಬಗರ್‌ಹುಕುಂ, 94 ಸಿ., 94ಸಿಸಿಯಂತಹ ಮಹತ್ವದ ಕಾಯ್ದೆಗಳು ಸಣ್ಣಪುಟ್ಟ ಲೋಪಗಳಿಂದಾಗಿ ಅನುಷ್ಠಾನ ಗೊಳ್ಳದೆ ನನೆಗುದಿಗೆ ಬಿದ್ದಿವೆ. ಜನರಿಗೆ ಭೂಮಿ ಕಲ್ಪಿಸುವ ಇಂತಹ ಕಾಯ್ದೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡಾಗ ಅದು ಸರಕಾರಕ್ಕೆ ಒಳ್ಳೆಯ ಹೆಸರು ಪಡೆಯಲು ಸಾಧ್ಯ. ಮುಂದಿನ ಆರು ತಿಂಗಳಲ್ಲಿ ಎಲ್ಲ ಕಾಯ್ದೆಗಳನ್ನು ಯಶಸ್ವಿ ಯಾಗಿ ಜಾರಿಗೆ ತಂದು ಜನರಿಗೆ ಭೂಮಿ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ಇಲ್ಲಿನ ನಗರಸಭಾ ರಂಗಮಂಟ ಪದಲ್ಲಿ ಬ್ಲಾಕ್ ಕಾಂಗ್ರೆಸ್‌ನ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಅಭಿ ನಂದನಾ ಸಮಾರಂಭದಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾ ಡುತ್ತಿದ್ದರು. ರಾಜ್ಯದಲ್ಲಿ ಭೂಮಿಗೆ ಸಂಬಂಧ ಪಟ್ಟ ಕೆಲವು ಕಾಯ್ದೆಗಳು ಯಶಸ್ವಿ ಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಕಂದಾಯ ಖಾತೆಯಂತಹ ಪ್ರಮುಖ ಜವಾಬ್ದಾ ರಿಯನ್ನು ನನಗೆ ನೀಡಿ ದ್ದು, ಅದನ್ನು ಸಮರ್ಪಕವಾಗಿ ನಿಭಾಯಿಸುವುದಾಗಿ ತಿಳಿಸಿದರು.

ಭೂಸುಧಾರಣಾ ಕಾಯ್ದೆ ಅನುಷ್ಠಾನ ಸಂದರ್ಭದಲ್ಲಿ ಜನರಿಗೆ ಭೂಮಿಯ ಹಕ್ಕು ಕೊಡಿಸಲು ನಾವು ನೆತ್ತರ ಹರಿಸಿದ್ದೇವೆ. ಅದಕ್ಕಾಗಿ ಜೀವನದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಈಗ ಕಂದಾಯ ಸಚಿವಸ್ಥಾನದಂತಹ ಮಹತ್ವದ ಅವಕಾಶ ಸಿಕ್ಕಿದೆ. ಈ ಸಂದರ್ಭದಲ್ಲಿ ಜನರಿಗೆ ಭೂಮಿಹಕ್ಕು ಕೊಡಿಸದೆ ಹೋದಲ್ಲಿ ತನ್ನ ಸಚಿವ ಸ್ಥಾನಕ್ಕೆ ಬೆಲೆ ಇಲ್ಲದಂತಾಗುವುದು ಎಂದರು.

 ಮುಂದಿನ 6 ತಿಂಗಳಿನಲ್ಲಿ ರಾಜ್ಯಾ ದ್ಯಂತ ಪ್ರವಾಸ ಮಾಡಿ ಭೂಮಿ ನೀಡುವ ಸಂಬಂಧ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಸಚಿವರು ಹೇಳಿದರು. ಹಿಂದಿನ ಬಿಜೆಪಿ ಸರಕಾರವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡ ಕಾಗೋಡು, ಸರಕಾರಿ ಜಾಗಗಳಲ್ಲಿ ಮನೆ ಕಟ್ಟಿಕೊಂಡು ಸ್ವಾಧೀನದ ಹಕ್ಕು ಹೊಂದಿಲ್ಲದವರಿಗೆ 5ಸಾವಿರ ಡರೂಪಾಯಿ ದಂಡ ಹಾಗೂ ಒಂದು ವರ್ಷ ಸಜೆ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಜನಪರವಲ್ಲದ, ಜಾನುವಾರು ಪರವಾದ ಇಂತಹ ಕಾಯ್ದೆ ತಿದ್ದುಪಡಿಯಿಂದ ಗ್ರಾಮೀಣ ಭಾಗದ ಜನರು ಜೈಲಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಾಗೋಡು ತಿಳಿಸಿದರು.

ಇಂದಿಗೂ ಜನರ ಸಮಸ್ಯೆ ಬಗೆಹರಿ ಸಲು ಸರಕಾರದಲ್ಲಿ ಜಡತ್ವ ಇದೆ. ಅದನ್ನು ಹಂತಹಂತವಾಗಿ ನಿವಾರಣೆ ಮಾಡಲಾಗುವುದು. ಜನರ ಬಳಿ ಓಟು ಕೇಳಲು ಮಾತ್ರ ಹೋಗುವುದಲ್ಲ. ಅವರಿಗೆ ಅಗತ್ಯ ಸೌಲಭ್ಯವನ್ನು ಕಲ್ಪಿಸುವ ಬಗ್ಗೆ ಪಕ್ಷದ ಮುಖಂಡರು ಚಿಂತನೆ ನಡೆಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಶಿಥಿಲಗೊಂಡಿದೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಜೊತೆಗೆ ಭವಿಷ್ಯದಲ್ಲಿ ಪಕ್ಷವನ್ನು ಜಿಲ್ಲೆಯಲ್ಲಿ ಸದೃಢಗೊಳಿಸುವ ನಿಟ್ಟಿನಲ್ಲಿ ಎಲ್ಲ ರೀತಿ ಪ್ರಯತ್ನ ನಡೆಸಲಾಗುವುದು ಎಂದರು. ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಬಿ.ಆರ್. ಜಯಂತ್ ಅಭಿನಂದನಾ ಭಾಷಣ ಮಾಡಿದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಸನ್ನಕುಮಾರ್, ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನ. ಶ್ರೀನಿವಾಸ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News