ಹೊನ್ನಾವರ: ನೆರೆ ಪೀಡಿತ ಪ್ರದೇಶಗಳಿಗೆ ಶಾಸಕಿ ಭೇಟಿ
ಹೊನ್ನಾವರ, ಜು.1: ತಾಲೂಕಿನ ವಿವಿಧ ನೆರೆ ಪೀಡಿತ ಪ್ರದೇಶಗಳಿಗೆ ಕ್ಷೇತ್ರದ ಶಾಸಕಿ ಶಾರದಾ ಮೋಹನ್ ಶೆಟ್ಟಿ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಪರಿಶೀಲಿಸಿ ಸಾಂತ್ವನ ಹೇಳಿದರು. ಕಡತೋಕಾ ಪಂಚಾಯತ್‌ನ ಗುಡನಕಟ್ಟು ಹೂಜಿನುರಿ ನೆರೆ ಪೀಡಿತ ಸ್ಥಳಗಳಿಗೆ ಭೆೇಟಿ ನೀಡಿ ಪರಿಸಿತ್ಥಿಗಳನ್ನು ಅವಲೋಕಿಸಿ ಸೂಕ್ತ ಪರಿಹಾರ ಹಾಗೂ ತುರ್ತು ಕಾರ್ಯಗಳನ್ನು ನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಕರ್ಕಿ ಪಂಚಾಯತ್‌ನ ತೊಪ್ಪಲಕೇರಿಯಲ್ಲಿ ಜಲಾವೃತ ಪ್ರದೇಶಗಳಿಗೆ ಭೆೇಟಿ ನೀಡಿ ನೀರು ಸುಲಭವಾಗಿ ಸಂಚರಿಸಲು ಚರಂಡಿ ವ್ಯವಸ್ಥೆ ಕಲ್ಪಿಸಿಕೊಟ್ಟರು. ಹಳದೀಪುರ ಪಂಚಾಯತ್‌ನ ಬಗ್ರಾಣಿ ತಿಮ್ಮಿ ಮುಕ್ರಿ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿರುವುದನ್ನು ವೀಕ್ಷಿಸಿ ಹೆಚ್ಚಿನ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಈ ಸಂದರ್ಭದಲ್ಲಿ ಕಡತೋಕಾ ಪಂಚಾಯತ್ ಉಪಾಧ್ಯಕ್ಷ ಎಂ.ಎಸ್. ಹೆಗಡೆ, ತಾ ಪಂ ಸದಸ್ಯ ತುಕಾರಾಮ ನಾಯ್ಕ, ಕರ್ಕಿ ಪಂ ಅಧ್ಯಕ್ಷ ಶ್ರೀಕಾಂತ ಮೋಗೆರ, ಹಳದೀಪುರ ಗ್ರಾಪಂ ಸದಸ್ಯ ವಿನಾಯಕ ಶೇಟ, ಶ್ರೀಧರ ನಾಯ್ಕ, ಮಂಜುನಾಥ್ ಶ್ಯಾನುಬಾಗ್, ಕರ್ಕಿ ಚಿದಾನಂದ ನಾಯ್ಕ, ತಾಪಂ ಸಿಇಒ ಮಹೇಶ್ ಕುರಿಯವರ ಮತ್ತಿತರರು ಉಪಸ್ಥಿತರಿದ್ದರು.