ವಿಧಾನಪರಿಷತ್ ಮುಖ್ಯಸಚೇತಕರಾಗಿ ಐವನ್ ಡಿ’ಸೋಜಾ ನೇಮಕ
Update: 2016-07-02 23:01 IST
ಬೆಂಗಳೂರು, ಜು.2: ವಿಧಾನಪರಿಷತ್‌ನ ಸರಕಾರದ ಮುಖ್ಯಸಚೇತಕರಾಗಿ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾರನ್ನು ನೇಮಕ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಜು.4ರಿಂದ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ, ಐವಾನ್ ಡಿ’ಸೋಜಾರನ್ನು ಮುಖ್ಯಸಚೇತಕರನ್ನಾಗಿ ನೇಮಕ ಮಾಡಿರುವ ಕುರಿತು ತಿಳಿಸಿದ್ದಾರೆ.