×
Ad

‘ಅಧಿಕಾರಿಗಳು ಅರ್ಜಿದಾರರಿಗೆ ನಗುಮುಖದ ಸೇವೆ ನೀಡಿ’

Update: 2016-07-02 23:12 IST

ಮಡಿಕೇರಿ, ಜು.2: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಅವರು ಕಡತಗಳನ್ನು ಸಕಾಲದಲ್ಲಿ ವಿಲೆೇವಾರಿ ಮಾಡದೆ ಸಾರ್ವಜನಿಕರನ್ನು ಸತಾಯಿಸುತ್ತಿದ್ದ ತಹಶೀಲ್ದಾರ್ ಕಚೆೇರಿಯ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡಿದ್ದಾರೆೆ.

ತಾಲೂಕು ಕಚೆೇರಿಗೆ ದಿಢೀರ್ ಭೇಟಿ ನೀಡಿದ ಅವರು, ಸಾರ್ವಜನಿಕರ ದೂರುಗಳನ್ನು ಆಲಿಸಿದರು. ಭೂ ದಾಖಲೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಎರಡು ಮೂರು ವರ್ಷ ಕಳೆದರೂ ವಿಲೆೇವಾರಿ ಮಾಡದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅರ್ಜಿದಾರರೊಬ್ಬರಿಗೆ ಐದು ವರ್ಷಗಳಿಗೆ ಸಂಬಂಧಿಸಿದಂತೆ ವಾರ್ಷಿಕ ಆದಾಯ ದೃಢೀಕರಣ ಪತ್ರ ತರುವಂತೆ ಹಾದಿ ತಪ್ಪಿಸಿದ ಶಿರಸ್ತೇದಾರ್ ಕೃಷ್ಣಮೂರ್ತಿ ಎಂಬವರ ಮೇಲೆ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆ ಅವರನ್ನು ತರಾಟೆೆಗೆ ತೆಗೆದುಕೊಂಡರು.

ತಹಶೀಲ್ದಾರ್ ಕಚೆೇರಿಗೆ ನೀವೇ ವಿಲನ್ ಎಂದು ಆರೋಪಿಸಿದ ಸಚಿವರು, ಶಿರಸ್ತೇದಾರ್‌ರನ್ನು ವರ್ಗಾವಣೆಗೊಳಿಸುವಂತೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು. ಹಣಕ್ಕಾಗಿ ವಿನಾಕಾರಣ ಜನರಿಗೆ ತೊಂದರೆ ನೀಡುತ್ತಿದ್ದೀರಿ, ಜನರ ಸೇವೆಗಾಗಿ ಅಧಿಕಾರಿಗಳು ಇರಬೇಕೇ ಹೊರತು, ಕಿರುಕುಳ ನೀಡುವುದಕ್ಕೆ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಒಂದು ಹಂತದಲ್ಲಿ ಅಧಿಕಾರಿಗಳನ್ನು ನಿಷ್ಪ್ರಯೋಜಕರೆಂದು ಜರಿದರು.

ಕಿರಿಯ ಅಧಿಕಾರಿಗಳು ಮಾಡುತ್ತಿರುವ ತಪ್ಪಿನ ವಿರುದ್ಧ ಹಿರಿಯ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು. ಮುಂದಿನ ಭೇಟಿಯ ಸಂದಭರ್ ಬಾಕಿ ಉಳಿದಿರುವ ಕಡತಗಳು ವಿಲೇವಾರಿಯಾಗದೆ ಇದ್ದಲ್ಲಿ ಬೆೇರೆಯದೇ ಆದ ಭಾಷೆಯನ್ನು ಅಧಿಕಾರಿಗಳ ವಿರುದ್ಧ ಬಳಸಬೆೇಕಾಗುತ್ತದೆ ಎಂದು ಸಚಿವ ಸೀತಾರಾಂ ಎಚ್ಚರಿಕೆ ನೀಡಿದರು. ತಮ್ಮ ಅಧೀನದ ಅಧಿಕಾರಿಗಳನ್ನು ತಾವೇ ನಿಯಂತ್ರಿಸಿ ಜನರಿಗೆ ಕೆಲಸ ಕಾರ್ಯಗಳು ಆಗುವಂತೆ ನೋಡಿಕೊಳ್ಳಬೇಕೆಂದು ತಹಶೀಲ್ದಾರ್ ಕುಂಞಮ್ಮರಿಗೆ ಸ್ಪಷ್ಟ ಸೂಚನೆ ನೀಡಿದರು. ಇಲ್ಲದಿದ್ದಲ್ಲಿ ನಿಮ್ಮನ್ನೆ ದೂಷಿಸಬೇಕಾಗುತ್ತದೆ ಎಂದು ತಿಳಿಸಿದರು. ಭೂ ದಾಖಲೆಗಳ ಕಡತಕ್ಕೆ ಸಂಬಂಧಿಸಿದಂತೆ ಅರ್ಜಿದಾರರೊಬ್ಬರು ಮಾತನಾಡಿ, ಎರಡು ವರ್ಷಗಳಿಗೆ ಸಂಬಂಧಿಸಿದ ಆದಾಯ ದೃಢೀಕರಣ ಪತ್ರ ಲಭ್ಯವಿದೆ. ಆದರೆ, 5 ವರ್ಷಗಳಿಗೆ ಅನ್ವಯಿಸಿದ ಆದಾಯ ದೃಢೀಕರಣ ಪತ್ರ ತರುವಂತೆ ಶಿರಸ್ತೇದಾರ್ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು. ಈ ಸಂದಭರ್ ಅಸಮಾಧಾನಗೊಂಡ ಸಚಿವರು, ಐದು ವರ್ಷಗಳಿಗೆ ಅನ್ವಯವಾಗುವ ಆದಾಯ ದೃಢೀಕರಣ ಪತ್ರ ಸಿಗುವ ಬಗ್ಗೆ ಇರುವ ಸುತ್ತೋಲೆ ತೋರಿಸುವಂತೆ ಶಿರಸ್ತೇದಾರರನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಅರ್ಜಿದಾರರೊಂದಿಗೆ ನಗುಮುಖದ ಸೇವೆಯನ್ನು ನೀಡದೆ ಗಂಟೆಗಟ್ಟಲೆ ವಾಟ್ಸ್‌ಆ್ಯಪ್‌ನಲ್ಲಿ ಮಗ್ನರಾಗಿರುತ್ತಾರೆಂದು ಸಾರ್ವಜನಿಕರು ಇದೇ ಸಂದರ್ಭ ಆರೋಪಿಸಿದರು.

ಸ್ಥಳದಲ್ಲಿದ್ದ ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಮಾತನಾಡಿ, ತಹಶೀಲ್ದಾರ್ ಕಚೆೇರಿಯಲ್ಲಿ ನೂರಾರು ಅರ್ಜಿಗಳು ವಿಲೆೇವಾರಿಯಾಗದೆ ಬಾಕಿ ಉಳಿದಿದ್ದು, ಅಧಿಕಾರಿಗಳ ವಿರುದ್ಧ ಅನೇಕ ದೂರುಗಳಿದ್ದರೂ ಇಲ್ಲಿಯವರೆಗೆ ಸಮಸ್ಯೆ ಬಗೆಹರಿದಿಲ್ಲವೆಂದು ಸಚಿವರ ಗಮನ ಸೆಳೆದರು. ಈ ಸಂದರ್ಭ ಮಾತನಾಡಿದ ಸಚಿವರು, ಮುಂದಿನ ಭೇಟಿಯೊಳಗೆ ಅವ್ಯವಸ್ಥೆ ಸರಿಯಾಗದಿದ್ದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಂತರ ನೆಮ್ಮದಿ ಕೇಂದ್ರಕ್ಕೂ ಸಚಿವರು ಭೆೇಟಿ ನೀಡಿ, ನಗುಮುಖದ ಸೇವೆಯನ್ನು ನೀಡುವಂತೆ ಅಲ್ಲಿನ ಸಿಬ್ಬಂದಿಗೆ ತಾಕೀತು ಮಾಡಿದರು.

ಇದೇ ಸಂದರ್ಭ ಸಚಿವರು ಸಾರ್ವಜನಿಕರಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿ ಅರ್ಜಿಗಳ ವಿಲೆೇವಾರಿಯಾಗದಿದ್ದಲ್ಲಿ ತಮ್ಮ ಗಮನಕ್ಕೆ ತರುವಂತೆ ತಿಳಿಸಿದರು. ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿ ನಂಜುಂಡೇಗೌಡ, ತಹಶೀಲ್ದಾರ್ ಕುಂಞಮ್ಮ ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News