×
Ad

ಬೇರೆಯವರ ಪರೀಕ್ಷೆ ಬರೆದ ಎಸ್ಸೈ ಬಂಧನ

Update: 2016-07-04 23:29 IST

ಬೆಂಗಳೂರು, ಜು.4: ಪೊಲೀಸ್ ಇಲಾಖೆ ಹುದ್ದೆಗಳ ನೇಮಕಾತಿಗಾಗಿ ಶಿಸ್ತಿನಿಂದ ನಡೆಯುವ ಲಿಖಿತ ಪರೀಕ್ಷೆಗೆ ಪೊಲೀಸ್ ಅಧಿಕಾರಿಯೊಬ್ಬರು ಬೇರೆಯವರ ಪರೀಕ್ಷೆ ಬರೆದು ಸಿಕ್ಕಿಬಿದ್ದಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ.
ಕೆಎಸ್‌ಆರ್‌ಪಿ ವಿಶೇಷ ರಿಸರ್ವ್ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಹುದ್ದೆಯ ನೇಮಕಾತಿ ಲಿಖಿತ ಪರೀಕ್ಷೆಯನ್ನು ಬೇರೆಯವರ ಹೆಸರಿನಲ್ಲಿ ಬರೆಯುತ್ತಿದ್ದ ನಗರದ ಬಿಟಿಎಂ ಲೇಔಟ್‌ನ ಅಬಕಾರಿ ಸಬ್‌ಇನ್‌ಸ್ಪೆಕ್ಟರ್ ಟಿ.ಎನ್.ಶ್ರೀನಿವಾಸ್(30) ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
 ಪ್ರಕರಣದ ಹಿನ್ನೆಲೆ: ಜು.3ರಂದು ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಕಾಲೇಜಿನಲ್ಲಿ ಕೆಎಸ್‌ಆರ್‌ಪಿ ವಿಶೇಷ ರಿಸರ್ವ್ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಹುದ್ದೆಯ ನೇಮಕಾತಿ ಲಿಖಿತ ಪರೀಕ್ಷೆ ನಡೆದಿದ್ದು, ಈ ಸಂದರ್ಭದಲ್ಲಿ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆಯುತ್ತಿದ್ದ ಪರಿಕ್ಷಾರ್ಥಿಯಾದ ಬಿ.ಸಿ.ಪ್ರದೀಪ್ ಕುಮಾರ್‌ನನ್ನು ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಗುರುತಿನ ಚೀಟಿ ತೋರಿಸಲು ಪ್ರಶ್ನಿಸಿದಾಗ ಅಭ್ಯರ್ಥಿ ಯಾವುದೇ ಗುರುತಿನ ಚೀಟಿಯನ್ನು ನೀಡದೆ ಮರೆತು ಬಂದಿರುತ್ತೇನೆಂದು ಉತ್ತರಿಸಿದ್ದರು. ಈ ಬಗ್ಗೆ ಅನುಮಾನಗೊಂಡ ಮೇಲ್ವಿಚಾರಕರು ಅಭ್ಯರ್ಥಿಯ ಬೆರಳು ಮುದ್ರೆಯನ್ನು ಬಯೋಮೆಟ್ರಿಕ್ ಯಂತ್ರದಿಂದ ಪರೀಕ್ಷಿಸಿದಾಗ ಅಭ್ಯರ್ಥಿಯ ಬೆರಳು ಮುದ್ರೆ ಹೊಂದಾಣಿಕೆಯಾಗಿಲ್ಲ. ಈ ಸಂಬಂಧ ಪ್ರದೀಪ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ತನ್ನ ಹೆಸರು ಟಿ.ಎನ್.ಶ್ರೀನಿವಾಸ ಇಲ್ಲಿನ ಬಿಟಿಎಂ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News