×
Ad

ರಾಜ್ಯ ಖಾತೆ ಸಚಿವರಾಗಿ ನೇಮಕಗೊಂಡ ರಮೇಶ್ ಜಿಗಜಿಣಗಿ ಕಿರು ಪರಿಚಯ

Update: 2016-07-05 11:42 IST

ವಿಜಯಪುರ, ಜೂ.5: ದಕ್ಷಿಣ ಭಾರತದಲ್ಲೇ ದಲಿತ ಸಮುದಾಯದ ಹಿರಿಯ ಸಂಸದ ರಮೇಶ್ ಜಿಗಜಿಣಗಿ ಚಿಕ್ಕೋಡಿ ಮೀಸಲು ಕ್ಷೇತ್ರದಿಂದ 2 ಬಾರಿ ಸಂಸದರಾಗಿದ್ದಾರೆ. 2009ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ವಿಜಯಪುರ ಲೋಕಸಭಾ ಕ್ಷೇತ್ರ ಮೀಸಲಾಗಿದ್ದರಿಂದ ತವರು ಜಿಲ್ಲೆಯ ರಾಜಕಾರಣಕ್ಕೆ ಮರಳಿದರು. 2014ರ ಲೋಕಸಭೆೆ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ಜನ್ಮದಿನ:28 ಜೂನ್ 1952

ಜನ್ಮಸ್ಥಳ: ಅಥರ್ಗಾ(ವಿಜಯಪುರ ಜಿಲ್ಲೆ)

ತಂದೆ: ಚಂದಪ್ಪ,

ತಾಯಿ: ಬೌರಮ್ಮ,

ವಿದ್ಯಾರ್ಹತೆ: ಬಿಎ

ಉದ್ಯೋಗ: ಕೃಷಿ

ರಾಜಕೀಯ ಅನುಭವ

1978: ಇಂಡಿ ತಾಲೂಕು ಅಭಿವೃದ್ದಿ ಮಂಡಳಿ ಸದಸ್ಯರಾಗಿ ಆಯ್ಕೆ

 1980: ಇಂಡಿ ಭೂನ್ಯಾಯ ಮಂಡಳಿ ಸದಸ್ಯರಾಗಿ ನಾಮ ನಿರ್ದೇಶನ

1983 ರಿಂದ 98: ಬಳ್ಳೊಳ್ಳಿ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆ

1983: ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಗೃಹ ಸಚಿವ

1984-85-ಅಬಕಾರಿ ಖಾತೆ ರಾಜ್ಯ ಸಚಿವ

1996-98: ಪಟೇಲ್ ಸಂಪುಟದಲ್ಲಿ ಸಮಾನ ಕಲ್ಯಾಣ, ಕಂದಾಯ ಸಚಿವ

1998, 1999, 2004: ಚಿಕ್ಕೋಡಿ ಮೀಸಲು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ

2009 ಹಾಗೂ 2014: ವಿಜಯಪುರ ಮೀಸಲು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News