ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈದ್ ಸಂದೇಶ
Update: 2016-07-05 16:38 IST
ರಮಝಾನ್ ಎಂದೇ ಜನಪ್ರಿಯವಾದ ಈದ್-ಉಲ್-ಫಿತ್ರ್ ಹಬ್ಬದ ಸುಸಂದರ್ಭದಲ್ಲಿ ‘ವಾರ್ತಾ ಭಾರತಿ’ ಕನ್ನಡ ದಿನಪತ್ರಿಕೆಯು ಹಬ್ಬದ ಮಹತ್ವ ಸಾರುವ ವಿಶೇಷ ಲೇಖನಗಳ ಅರ್ಥಗರ್ಭಿತ, ಆಕರ್ಷಣೀಯ ಹಾಗೂ ವರ್ಣರಂಜಿತ ವಿಶೇಷಾಂಕವನ್ನು ಹೊರತರುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ.
ಧರ್ಮನಿಷ್ಠ ತತ್ವ ಹಾಗೂ ಸಿದ್ಧಾಂತಗಳ ಪರಿಪಾಲನೆ ಮಾತ್ರವಲ್ಲದೆ, ಮಾಸವಿಡೀ ಸಾಂಪ್ರದಾಯಿಕ ವಿಶೇಷ ಪ್ರಾರ್ಥನೆ ಹಾಗೂ ಉಪವಾಸ ಆಚರಣೆಗಳೊಂದಿಗೆ ಮನಃಶುದ್ಧಿ ಹಾಗೂ ದೇಹ ಶುದ್ಧಿಗೆ ಒತ್ತು ನೀಡುವ ರಮಝಾನ್ ಹಬ್ಬವು ನಾಡಿನ ಎಲ್ಲಾ ಮುಸಲ್ಮಾನ ಬಾಂಧವರಲ್ಲಿ ಉಲ್ಲಾಸ ಮತ್ತು ಉತ್ಸಾಹವನ್ನು ಚಿಮ್ಮಿಸಲಿ.
ಅಲ್ಲದೆ, ಭಾವನಾತ್ಮಕ ಸಂಬಂಧಗಳ ಜೊತೆ ಜೊತೆಗೆ ಭಾವೈಕ್ಯತೆಯನ್ನೂ ಮೂಡಿಸಲು ಪ್ರೇರಣೆ ಹಾಗೂ ಸ್ಫೂರ್ತಿಯನ್ನು ನೀಡಲಿ ಎಂದು ಮನಸಾರೆ ಹಾರೈಸುತ್ತೇನೆ.