ಬೈಕ್‌ಗಳ ಢಿಕ್ಕಿ: ಸವಾರರು ಗಂಭೀರ
ಮುಂಡಗೋಡ, ಜು.5: ಬೈಕ್‌ಗಳು ಮುಖಾಮುಖಿ ಢಿಕ್ಕಿ ಹೊಡೆದು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಾದ ಘಟನೆ ಪಟ್ಟಣ ಯಲ್ಲಾಪುರ-ಮುಂಡಗೋಡ ರಸ್ತೆಯ ಅಮ್ಮಾಜಿ(ದೊಡ್ಡ) ಕೆರೆ ಹತ್ತಿರ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಗಂಭೀರವಾಗಿ ಗಾಯಗೊಂಡು ಕಿಮ್ಸ್‌ಗೆ ದಾಖಲಾದ ಬೈಕ್ ಸವಾರರನ್ನು ತಾಲೂಕಿನ ಮೈನಳ್ಳಿ ಗ್ರಾಮದ ಬಾಬು ಜಾನೆ ಗಾವಡೆ(40) ಹಾಗೂ ದಾದಾಪೀರ ಶಿಂದೆ(24), ಎಂದು ಗುರುತಿಸಲಾಗಿದೆ. ಇನ್ನೋರ್ವ ಬೈಕ್ ಸವಾರನನ್ನು ಮುಂಡಗೋಡ ವಕೀಲ ಮಕ್ಬೂಲ್ ಅಹ್ಮದ್ ಬಿಜಾಪುರ ಎಂದು ತಿಳಿದು ಬಂದಿದೆ.
ಇವರು ಯಲ್ಲಾಪುರ ಕಡೆಗೆ ಬರುತ್ತಿದ್ದಾಗ ಗುರುತಿಸಲಾಗಿದೆ. ಇನ್ನೋರ್ವ ಬೈಕ್ ಸವಾರನನ್ನು ಮುಂಡಗೋಡ ವಕೀಲ ಮಕ್ಬೂಲ್ ಅಹ್ಮದ್ ಬಿಜಾಪುರ ಗುಂಜಾ ವತಿಯಿಂದ ಪಟ್ಟಣದ ಕಡೆ ಬರುತ್ತಿದ್ದು ಎದುರು ಬದುರು ಢಿಕ್ಕಿ ಸಂಭವಿಸಿದೆ. ಮೈನಳ್ಳಿ ಗ್ರಾಮದ ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿದ್ದು, ತಲೆಗೆ ಪೆಟ್ಟಾಗಿದೆ ಹಾಗೂ ಅಹ್ಮದ್ ಬಿಜಾಪುರರ ಬಲಕಾಲಿಗೆ ಗಾಯವಾಗಿದೆ. ಇವರಿಗೆ ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.