×
Ad

ಮಂಗಳೂರು ಖಾಝಿಯವರ ಈದ್ ಸಂದೇಶ

Update: 2016-07-06 08:27 IST

ಶ್ರೇಷ್ಠ ಮೌಲ್ಯಗಳು ಹಾಗೂ ಚಿಂತನೆಗಳನ್ನು ನಮಗೆ ಕಲಿಸುವ ಪವಿತ್ರ ತಿಂಗಳು ರಮಝಾನ್ ಅತಿಥಿಯಂತೆ ಬಂದು ಇದೀಗ ನಿರ್ಗಮಿಸುತ್ತಿದೆ. ಅದು ನಿರ್ಗಮಿಸುವಾಗ ನಮಗೆ ಈದುಲ್ ಫಿತ್ರ್ ನ ಬಹುಮಾನವನ್ನು ನೀಡಿದೆ.

ಈದುಲ್ ಫಿತ್ರ್ ನ ದಿನವನ್ನು ಪ್ರವಾದಿ (ಸ) ಅವರು ‘ಬಹುಮಾನದ ದಿನ’ ಎಂದು ಬಣ್ಣಿಸಿದ್ದಾರೆ. ಇದು ಪರಸ್ಪರ ಪ್ರೀತಿ, ಖುಷಿ ಹಂಚಿಕೊಳ್ಳುವ ದಿನ. ಇದು ಪರಸ್ಪರ ಅನುಮಾನ, ದ್ವೇಷ, ಅಪನಂಬಿಕೆ ಹಾಗೂ ವರ್ಗೀಯತೆಗಳನ್ನು ದೂರ ಸರಿಸುವ ದಿನವೂ ಆಗಿದೆ. ನಾವೆಲ್ಲರೂ ಒಬ್ಬರನ್ನೊಬ್ಬರು ಅರಿತುಕೊಂಡು, ಪರಸ್ಪರ ಗೌರವ, ಪ್ರೀತಿ ಬೆಳೆಸಿಕೊಂಡು ಉತ್ತಮ ಸಮಾಜವೊಂದನ್ನು ರೂಪಿಸಲು ಈದುಲ್ ಫಿತ್ರ್ ಅತ್ಯುತ್ತಮ ಅವಕಾಶವಾಗಿದೆ. ಅಂತಹ ಆದರ್ಶ ಸಮಾಜ ನಿರ್ಮಾಣದ ಮೂಲಕ ನಮ್ಮ ದೇಶವನ್ನು ನಾವು ಬಲಪಡಿಸಬೇಕಾಗಿದೆ.

ಈ ನಾಡನ್ನು ನಡೆಸುತ್ತಿರುವವರಿಗೂ ಸರ್ವಶಕ್ತನಾದ ಅಲ್ಲಾಹನು ಅನುಗ್ರಹಿಸಲಿ ಹಾಗೂ ಎಲ್ಲರಿಗೂ ನ್ಯಾಯ ಒದಗಿಸಲು ಅವರಿಗೆ ಸಾಧ್ಯವಾಗಲಿ ಎಂದು ಪ್ರಾರ್ಥಿಸೋಣ. ಪ್ರತಿಯೊಬ್ಬರಿಗೂ ಈದುಲ್ ಫಿತ್ರ್‌ನ ಹಾರ್ದಿಕ ಶುಭಾಶಯಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor