×
Ad

ಮಂಗಳೂರು ಬಿಷಪ್ ರ ಈದ್ ಸಂದೇಶ

Update: 2016-07-06 10:30 IST

ವಿಶ್ವ ಸಮೂಹಕ್ಕೆ ಮಾನವ ಮೈತ್ರಿಯನ್ನು, ಸ್ನೇಹ ಸೌಹಾರ್ದ, ದಾನ-ಧರ್ಮ ತ್ಯಾಗದ ಸಂದೇಶವನ್ನು ಸಾರುವ ಈದುಲ್ ಫಿತ್ರ್ ಜಾಗತಿಕ ಮುಸಲ್ಮಾನರ ಅತ್ಯಂತ ಪವಿತ್ರ ಹಬ್ಬ. ತಿಂಗಳು ಪೂರ್ತಿ ಅನ್ನಾಹಾರಗಳನ್ನು, ದೇಹೇಚ್ಛೆಯನ್ನು ನಿಯಂತ್ರಿಸಿ ದೇವರ ಆಜ್ಞೆಯನ್ನು ಪಾಲಿಸಿ ಪೆರ್ನಾಳ್ ಆಚರಿಸುವ ಸರ್ವ ಮುಸ್ಲಿಂ ಬಂಧುಗಳಿಗೆ ರಮಝಾನ್ ಹಬ್ಬದ ಶುಭಾಶಯಗಳು.

ರಮಝಾನ್ ನವಜೀವನದ ಹೊಸ ಆಕಾಂಕ್ಷೆಗಳೊಂದಿಗೆ ಪರಿಶುದ್ಧತೆಯ, ಪರಸ್ಪರ ಸಹಬಾಳ್ವೆಯ ನವಚೈತನ್ಯವನ್ನು ಪ್ರತಿಯೊಬ್ಬರ ಹೃದಯದಲ್ಲೂ ಮೂಡಿಸಲಿ. ತನ್ಮೂಲಕ ಮಾನವಕುಲದ ಅರ್ಥಪೂರ್ಣ ಬಾಂಧವ್ಯಕ್ಕೆ, ಸರ್ವ ಪ್ರಗತಿಗೆ, ಸೌಹಾರ್ದ ಪೂರ್ಣ ಬದುಕಿಗೆ ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor