×
Ad

ಭೂ ಕಾಯ್ದೆ ಪರಿಷ್ಕರಿಸಲು ಭೂಮಿ-ವಸತಿ ಹಕ್ಕು ವಂಚಿತರ ಒತ್ತಾಯ

Update: 2016-07-08 22:38 IST

ಮಡಿಕೇರಿ, ಜು.8: ರಾಜ್ಯದಲ್ಲಿರುವ ಅರ್ಹ ಫಲಾನುಭವಿಗಳಿಗೆ ಭೂಮಿ ಹಂಚಲು ಭೂ ಸುಧಾರಣಾ ನೀತಿಯನ್ನು ಮತ್ತು ಭೂ ಮಿತಿ ಕಾಯ್ದೆಯನ್ನು ಪರಿಷ್ಕರಿಸಿ ಜಾರಿಗೆ ತರಬೇಕೆಂದು ಭೂಮಿ ಮತ್ತು ವಸತಿ ಹಕ್ಕು ಂಚಿತರ ಹೋರಾಟ ಸಮಿತಿ ಒತ್ತಾಯಿಸಿದೆ.

  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಪ್ರಮುಖ ಸಿರಿಮನೆ ನಾಗರಾಜು,ಬಡವರಿಗೆ ಭೂಮಿ ಹಂಚಿಕೆ ಮಾಡಲು ಸರಕಾರ ಸಮಿತಿಯೊಂದನ್ನು ರಚಿಸಬೇಕು, ಸಮಿತಿಯಲ್ಲಿ ಅಧಿಕಾರಿಗಳು ಮಾತ್ರವಲ್ಲದೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ನಂತರ ಕಾಲಮಿತಿಯನ್ನು ಹಾಕಿಕೊಂಡು ಭೂಮಿಯನ್ನು ಹಂಚಲು ಕ್ರಮಕೈಗೊಳ್ಳಬೇಕು. ಈಗಾಗಲೇ ಲಭ್ಯವಿರುವ ಜಾಗದ ಬಳಕೆ ಯಾವೆಲ್ಲ ರೀತಿಯಲ್ಲಿ ನಡೆದಿದೆ ಎನ್ನುವ ಬಗ್ಗೆ ಭೂ ತಪಾಸಣೆ ಮಾಡಬೇಕು. ಕೈಗಾರಿಕೆಗೆೆಂದು ಮಂಜೂರು ಮಾಡಿಕೊಂಡಿರುವ ಭೂಮಿ ಪಾಳುಬಿದ್ದಿದ್ದು, ಇದರ ವಾರಿಸುದಾರರು ಬ್ಯಾಂಕ್‌ಗಳಿಂದ ಸಾಲವನ್ನಷ್ಟೆ ಪಡೆದಿದ್ದಾರೆ. ಆದ್ದರಿಂದ ಮಂಜೂರು ಆಗಿರುವ ಭೂಮಿಯ ಆಡಿಟಿಂಗ್ ಅಗತ್ಯವಾಗಿದೆ ಎಂ

ು ಸಿರಿಮಲೆ ನಾಗರಾಜು ಅಭಿಪ್ರಾಯಪಟ್ಟರು. ಬಡವರಿಗೆ ಜಾಗವನ್ನು ಮಂಜೂರು ಮಾಡುವುದಲ್ಲದೆ, ಅದರ ಅಭಿವೃದ್ಧಿಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ರಾಜ್ಯದಲ್ಲಿ 11 ಲಕ್ಷ ಎಕರೆಯಷ್ಟು ಭೂಮಿ ಒತ್ತುವರಿಯಾಗಿದ್ದು, ಇದರಲ್ಲಿ ಶೇ. 80ರಷ್ಟು ಭಾಗ ಪ್ರಭಾವಿಗಳ ಪಾಲಾಗಿ

ದೆ. ಇದನ್ನು ತೆರವುಗೊಳಿಸಲು ಸರಕಾರ ಕ್ರಮ ಕೈಗೊಳ್ಳಬೇಕು. ಭೂಮಿಯ ಹಕ್ಕಿಗಾಗಿ ಒತ್ತಾಯಿಸಿ ಜು.20ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿ ಎದುರು ಸಮಿತಿಯ ಮೂಲಕ ಧರಣಿ ನಡೆಸಲಾಗುವುದೆಂದರು.ಈ ಸಂದರ್ಭ ಜಿಲ್ಲಾಧಿಕಾರಿಗಳು ಮಾತ್ರವಲ್ಲದೆ ಶಾಸಕರಿಗೂ ಮನವಿ ಪತ್ರ ಸಲ್ಲಿಸಲಾಗುವುದು. ಇದಾದ ಒಂದು ತಿಂಗಳೊಳಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಆ.20ರಂದು ನಡೆಯುವ ದೇವರಾಜು ಅರಸು ಜನ್ಮ ಶತಮಾನೋತ್ಸವ ಸಂದರ್ಭ ಬೆಂಗಳೂರು ಚಲೋ ಹೋರಾಟವನ್ನು ಕೈಗೆತ್ತಿಕೊಳ್ಳುವುದಾಗಿ ಸಿರಿಮಲೆ ನಾಗರಾಜು ಎಚ್ಚರಿಕೆ ನೀಡಿದರು. ಪ್ರಮುಖರಾದ ಡಿ.ಎಸ್. ನಿರ್ವಾಣಪ್ಪ ಮಾತನಾಡಿ, ಜಿಲ್ಲೆಯಲ್ಲಿ ಆದಿವಾಸಿ ಅರಣ್ಯ ಹಕ್ಕು ಕಾಯ್ದೆ ವಿಫಲವಾಗಿದ್ದು, ನಿಯಮದ ಪ್ರಕಾರ ಫಲಾನುಭವಿಗಳಿಗೆ ತಲಾ 10 ಎಕರೆ ಭೂಮಿ ಹಂಚಬೇಕಾಗಿದ್ದರೂ ಕೆಲವರಿಗೆ 10 ಸೆಂಟ್ಸ್ ಜಾಗ ಮಾತ್ರ ನೀಡಲಾಗಿದೆ ಎಂದು ಆರೋಪಿಸಿದರು. ಬಡವರಿಗೆ ಭೂಮಿ ಸಿಗುವವರೆಗೆ ಜಿಲ್ಲೆಯಲ್ಲಿ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.

ವಕೀಲ ಕೆ.ಆರ್. ವಿದ್ಯಾಧರ್ ಮಾತನಾಡಿ, ಭೂ ಮಿತಿ ಕಾಯ್ದೆ ಪರಿಷ್ಕರಣೆ ಮಾಡುವ ಮೂಲಕ ಭೂಮಿ ಹಂಚಿಕೆಗೆ ಸರಕಾರ ಮುಂದಾಗಬೇಕೆಂದು ಒತ್ತಾಯಿಸಿದರು. ನಿವೇಶನವನ್ನು ನೀಡಬೇಕು. ಭೂ ನ್ಯಾಯ ಮಂಡಳಿಗಳನ್ನು ಪುನರ್ ರಚಿಸಬೇಕು, ಕಂಪೆನಿ, ಎಸ್ಟೇಟ್‌ಗಳು, ಮಠ ಮಾನ್ಯಗಳು ಸೇರಿದಂತೆ ಬಲಾಢ್ಯರಿಂದ ನಡೆದಿರುವ ಒತ್ತುವರಿಯನ್ನು ಕಟ್ಟುನಿಟ್ಟಾಗಿ ತೆರವುಗೊಳಿಸಿ ವಶಪಡಿಸಿಕೊಳ್ಳಬೇಕು. ಪ್ರಭಾವಿಗಳ ಅಕ್ರಮ ಮಂಜೂರಾತಿಯ ಜಾಗವನ್ನು ವಶಕ್ಕೆ ಪಡೆದು ಬಡವರಿಗೆ ಹಂಚಬೇಕು, ಕೃಷಿ ಭೂಮಿಯನ್ನು ಕಾರ್ಪೊರೇಟ್ ಶಕ್ತಿಗಳಿಂದ ಮುಕ್ತಗೊಳಿಸಬೇಕೆಂದು ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಕುಂದೇಗಾಲ ಶ್ರೀನಿವಾಸ್, ಎಚ್.ಸಿ.ಸಣ್ಣಪ್ಪ, ಕೆ.ಬಿ.ಆನಂದ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News