×
Ad

ಅರಣ್ಯದಲ್ಲಿ ಬೀಜ ಬಿತ್ತನೆ ಕಾರ್ಯಕ್ರಮ

Update: 2016-07-09 21:36 IST

ಕುಶಾಲನಗರ, ಜು.9: ಕಾಡಿನಲ್ಲಿ ಬರಿದಾಗುತ್ತಿರುವ ಮೇವು ಆನೆ ಮತ್ತು ಮನುಷ್ಯನ ನಡುವಿನ ಸಂಘರ್ಷಕ್ಕೆ ಕಾರಣ ಎಂಬುದು ತಪ್ಪುಕಲ್ಪನೆ, ದಿನನಿತ್ಯ ಆನೆಗಳು 20ರಿಂದ 30 ಕಿ.ಮೀ.ವರೆಗೆ ನಡೆದರೆ ಆನೆಗಳು ಆರೋಗ್ಯವಾಗಿ ಇರಲು ಸಾಧ್ಯ. ಅಂತಹ ಸಂದರ್ಭದಲ್ಲಿ ಬರುವಾಗ ಅನೇಕ ಕಾರಣಗಳಿಂದ ದಿಕ್ಕು ಬದಲಾಗಿ ನಾಡಿಗೆ ಬರುತ್ತಿದೆ. ಕಾಡಿನಲ್ಲಿ ಆನೆಗಳಿಗೆ ಅಲ್ಪಪ್ರಮಾಣದಲ್ಲಿ ಆಹಾರ ಕಡಿಮೆ ಆಗಿರಬಹುದು, ಆದರೆ ಆಹಾರಕ್ಕೆ ಬೇಕಾದ ಗಿಡಗಳನ್ನು ಬೆಳೆಸುತ್ತಾ ಬಂದಿದ್ದೇವೆಂದು ಕರ್ನಾಟಕ ಅರಣ್ಯ ಇಲಾಖೆ ಮಡಿಕೇರಿ ವಿಭಾಗದ, ಕುಶಾಲನಗರ ವಲಯ ಹಮ್ಮಿಕೊಂಡಿದ್ದ ಅತ್ತೂರು ಮತ್ತು ಆನೆಕಾಡು ಮೀಸಲು ಅರಣ್ಯದಲ್ಲಿನ ‘ಕೋಟಿ ವೃಕ್ಷ ಆಂದೋಲನ’ದ ಅರಣ್ಯದಲ್ಲಿ ಬೀಜ ಬಿತ್ತನೆ ಕಾರ್ಯಕ್ರಮದಲ್ಲಿ ಎ.ಸಿ.ಎಫ್ ಎಂ.ಎಸ್ ಚಿನ್ನಪ್ಪತಿಳಿಸಿದರು.

  
ಇದೇ ಸಂದರ್ಭದಲ್ಲಿ ಮಾತನಾಡಿದ ಅರಣ್ಯ ಇಲಾಖೆ ಮಡಿಕೇರಿ ವಿಭಾಗದ ಡಿ.ಎಫ್ ಏಳುಕುಂಡಲ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರ ನಿರ್ದೇಶನ ಹಾಗೂ ಅರಣ್ಯ ಸಚಿವರ ಚಿಂತನೆಗೆ ಅನುಗುಣವಾಗಿ ಇಂದು ಅರಣ್ಯದಲ್ಲಿ ಆನೆಗಳಿಗೆ ಮತ್ತು ಕಾಡುಪ್ರಾಣಿಗಳ ಆಹಾರಕ್ಕೆ ಅಗತ್ಯವಾದ ಹೊನ್ನೆ, ತಾಳೆೆ, ಅಂಟುವಾಳ, ಹೊಂಗೆ, ಕೂಳಿ, ಹಲಸು ಜೊತೆ ವಿಶೇಷವಾಗಿ ಆನೆಗಳ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಬೈನೆ ಹಾಗೆ ರಾಗಿ ಬೀಜವನ್ನು ಕುಶಾಲನಗರ ವಲಯದ ಅತ್ತೂರು ಮತ್ತು ಆನೆಕಾಡು ಮೀಸಲು ಅರಣ್ಯದಲ್ಲಿ ಕೋಟಿ ವೃಕ್ಷ ಆಂದೋಲನ ಸಲುವಾಗಿ ಬೀಜ ಬಿತ್ತನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಯೆಂದರು. ಜಗತ್ತಿನಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದ್ದು, ಅದಕ್ಕೆ ಪರಿಹಾರವಾಗಿ, ಹೆಚ್ಚಾಗಿ ತಂಪು ಹಾಗೂ ಶುದ್ಧ ಗಾಳಿ ನೀಡುವ ಹೊಂಗೆಯಂತಹ ಗಿಡಗಳನ್ನು ಅರಣ್ಯದೊಳಗೆ ಬೀಜ ಬಿತ್ತನೆ ಮಾಡುವುದರಲ್ಲಿ ಕಾರ್ಯ ನಿರತರಾಗಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News