×
Ad

ಕಂದಾಯ ಸಚಿವರಿಂದ ನವೀಕೃತ ಗ್ರಂಥಾಲಯ ಕಟ್ಟಡ ಉದ್ಘಾಟನೆ

Update: 2016-07-09 22:07 IST

ತೀರ್ಥಹಳ್ಳ್ಳಿ,ಜು.9: ಯುವಕರು ಮತ್ತು ಓದುಗರು ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಗ್ರಂಥಾಲಯ ಸ್ಥಾಪನೆಗೆ ಪ್ರಯತ್ನ ಮಾಡುತ್ತೇನೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

 ಪಟ್ಟಣದ ಗ್ರಂಥಾಲಯ ಆವರಣದಲ್ಲಿ ತೀರ್ಥಹಳ್ಳಿಯ ರಾಷ್ಟ್ರಕವಿ ಕುವೆಂಪು ಸ್ಮಾರಕ ಶಾಖಾ ಗ್ರಂಥಾಲಯದ ನವೀಕೃತ ಕಟ್ಟಡ ಹಾಗೂ ಅಂತರ್ಜಾಲ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

 ಬದಲಾವಣೆಗೆ ಪೂರಕ ವಾತಾವರಣ ನೀಡಿದ ಈ ಪುಣ್ಯ ಭೂಮಿಯಲ್ಲಿ ಗ್ರಂಥಾಲಯ ಉದ್ಘಾಟನೆ ಮಾಡುವ ಅವಕಾಶ ಸಿಕ್ಕಿದೆ. ರಾಷ್ಟ್ರಕವಿ ಕುವೆಂಪು, ರಾಜ್ಯದ ಮೊದಲ ಕಂದಾಯ ಸಚಿವ ಕಡಿದಾಳು ಮಂಜಪ್ಪ ಹೋರಾಟಕ್ಕೆ ಹೊಸ ರೂಪ ನೀಡಿದ ಶಾಂತವೇರಿ ಗೋಪಾಲಗೌಡರ ಈ ಪವಿತ್ರ ಭೂಮಿ ಗೇಣಿರೈತರ ಬದುಕಿಗೆ ಹೊಸ ದಿಕ್ಕು ನೀಡಿದ ನೆಲವಾಗಿದೆ ಎಂದರು.

ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಾಣದಿಂದ ಓದುಗರಿಗೆ ಹೆಚ್ಚು ಅನುಕೂಲವಾಗಿದೆ. ಗ್ರಂಥಾಲಯಗಳಿಗೆ ವಿವಿಧ ಇಲಾಖೆಯಿಂದ ಬರುವಂತಹ ಕರದ ವಿಚಾರದ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಮಾತನಾಡಲಿದ್ದೇನೆ ಎಂದರು.

   

ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ಗ್ರಂಥಾಲಯವನ್ನು ಸುಶಿಕ್ಷಿತರು ಸದ್ಬಳಕೆ ಮಾಡಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ಪುಸ್ತಕಗಳು ಗ್ರಂಥಾಲಯಗಳಲ್ಲಿರುವುದು ಪೂಜೆಗಲ್ಲ, ಓದಿಗೆ ಮಾತ್ರ. ಸಮಾಜಮುಖಿ ಚಿಂತನೆಗಳಿಗೆ ಓದು ಅತಿಮುಖ್ಯ ಎಂದರು. ಈ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಸನ್ನಕುಮಾರ್,ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಪಪಂ ಅಧ್ಯಕ್ಷ ಅಸಾದಿ, ಜಿಪಂ ಸದಸ್ಯರಾದ ಶರತ್ ಪೂರ್ಣೇಶ್, ಕಲ್ಪನಾ ಪದ್ಮನಾಭ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News