×
Ad

ನ್ಯಾಯ ಸಮ್ಮತ ತನಿಖೆಗೆ ಸಭಾಪತಿ ಡಿ.ಎಚ್. ಶಂಕರ್‌ಮೂರ್ತಿ ಸಲಹೆ

Update: 2016-07-10 22:15 IST

ಕುಶಾಲನಗರ, ಜು. 10: ಸರಕಾರಿ ಅಧಿಕಾರಿಗಳನ್ನು ರಾಜಕೀಯ ಹಾಗೂ ಇನ್ನಿತರ ಒತ್ತಡಳಿಗೆ ಒಳಗಾಗಿಸದೆ ಅವರನ್ನು ಸ್ವತಂತ್ರರಾಗಿ ಕೆಲಸ ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್ ಶಂಕರ್‌ಮೂರ್ತಿ ಹೇಳಿದ್ದಾರೆ.

 ಖಾಸಗಿ ಕಾರ್ಯಕ್ರಮದ ನಿಮಿತ್ತ ಕುಶಾಲನಗರಕ್ಕೆ ಅಗಮಿಸಿದ್ದ ಸಂದರ್ಭ ಡಿವೈಎಸ್ಪಿ ಎಂ.ಕೆ. ಗಣಪತಿಯವರ ಆತ್ಮಹತ್ಯೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಘಟನೆ ದುರದೃಷ್ಟಕರ ಸಂಗತಿ. ಇಂತಹ ಘಟನೆಗಳು ರಾಜ್ಯದಲ್ಲಿ ನಡೆಯಬಾರದಿತ್ತು. ಇಂತಹಾ ಸಂಸ್ಕೃತಿ ಮುಂದುವರಿದರೆ ಜನತೆ ಸರಕಾರ ಹಾಗೂ ರಾಜಕೀಯ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದು ಕೊಳ್ಳುವಂತಾಗುತ್ತದೆ ಎಂದರು.

 ಈ ಪ್ರಕರಣವನ್ನು ಈಗಾಗಲೇ ಸಿಐಡಿಗೆ ವಹಿಸಲಾಗಿದೆ. ಸಿಬಿಐಗೆ ಹಸ್ತಾಂತರಿಸಬೇಕೆಂದು ಒತ್ತಾಯ ಕೇಳಿಬರುತ್ತಿವೆ. ಯಾರಿಗೆ ವಹಿಸಿದರೂ ನ್ಯಾಯ ಸಮ್ಮತವಾಗಿ ತನಿಖೆ ನಡೆಸಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರೆ ಸಾಲದು ಜೊತೆಗೆ ನ್ಯಾಯ ಸಿಗುವಂತಾಗಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News