×
Ad

ನೀರಿನ ಮಟ್ಟದಲ್ಲಿ ಏರಿಕೆ ಹಿನ್ನೆಲೆ ಹಾರಂಗಿಯಿಂದ 4,200 ಕ್ಯೂಸೆಕ್ಸ್ ನೀರು ಬಿಡುಗಡೆ

Update: 2016-07-10 22:15 IST

 ಕುಶಾಲನಗರ, ಜು. 10: ಕೊಡಗು ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯ ಭರ್ತಿಯಾಗಿದೆ. ನೀರಿನ ಮಟ್ಟದಲ್ಲಿ ಏರಿಳಿತ ಕಂಡುಬರುತ್ತಿದ್ದು, ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಶಿವಪ್ಪನವರ ನೇತೃತ್ವದಲ್ಲಿ ಪೂಜೆ ನೆರವೇರಿಸಿ ನದಿಗೆ ನೀರು ಹರಿಯಬಿಡಲಾಯಿತ್ತು. ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2, 859 ಅಡಿಗಳಾಗಿದ್ದು, ಇಂದು ಸುರಿದ ಧಾರಾಕಾರ ಮಳೆಯ ಕಾರಣ ನೀರಿನ ಮಟ್ಟ 2857.41 ಅಡಿಗಳಿಗೆ ತಲುಪಿತ್ತು. ಈ ಹಿನ್ನೆಲೆಯಲ್ಲಿ ನದಿಪಾತ್ರದ ಜನರ ಹಿತರಕ್ಷಣೆಯ ದೃಷ್ಟಿಯಿಂದ 2.5 ನೀರನ್ನು ಕಾಯ್ದಿರಿಸಿಕೊಂಡು 4, 200 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿ ಯಬಿಡಲಾಯಿತು. ಈ ಸಂದರ್ಭ ಇಇ ಎಸ್.ಸಿ. ರಂಗಸ್ವಾಮಿ, ಸಹಾಯಕ ಇಂಜಿನಿಯರ್‌ಗಳಾದ ಧರ್ಮರಾಜ್ ಮತ್ತು ನಾಗರಾಜ್, ಗ್ರಾಮ ಪಂಚಾಯತ್ ಸದಸ್ಯ ಭಾಸ್ಕರ, ಕಚೇರಿ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News