×
Ad

ಪಠ್ಯಪದ್ಧತಿ ಕೇಸರೀಕರಣ ತಡೆಗೆ ಶಾಶ್ವತ ಪರಿಹಾರ ಕೈಗೊಳ್ಳಲು ಶಿಕ್ಷಣ ಸಚಿವರಿಗೆ ಮನವಿ

Update: 2016-07-12 23:43 IST

ಬೆಂಗಳೂರು, ಜು.12: ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ಸೇಠ್ರನ್ನು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಗೂ ವಕ್ಫ್ ಸಮಿತಿ ಸದಸ್ಯ ಎನ್.ಕೆ.ಎಂ.ಶಾಫಿ ಸಅದಿ ಅವರು ಭೇಟಿ ಮಾಡಿ, ಪಠ್ಯಪದ್ಧತಿ ಕೇಸರೀಕರಣವಾಗದಂತೆ ತಡೆಯುವ ಶಾಶ್ವತ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ಮನವಿ ಸಲ್ಲಿಸಿದರು.

ಪಠ್ಯಪದ್ಧತಿ ಕೇಸರಿಕರಣ ಸಂಬಂಧ ಆರೋಪ ಪ್ರತ್ಯಾರೋಪಗಳು ನಡೆಯುತ್ತಲೇ ಇರುತ್ತದೆ. ಸರಕಾರ ಬದಲಾಗುವುದರೊಂದಿಗೆ ಶಾಲಾ ಪಠ್ಯಕೂಡ ಬದಲಾಗುವ ಪರಿಪಾಠ ಇಲ್ಲವಾಗಬೇಕು. ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಲ್ಲೇ ನೂರಾರು ಕನ್ನಡ, ಉರ್ದು ಮಾಧ್ಯಮ ಶಾಲೆಗಳು ಮುಚ್ಚಿರುವ ಬಗ್ಗೆ ವರದಿಯಾಗುತ್ತಿದೆ. ಇಂಗ್ಲೀಷ್ ಪ್ರಮುಖ ಭಾಷೆಯಾಗಿದ್ದುಕೊಂಡೇ ಕನ್ನಡ, ಉರ್ದು ಮಾಧ್ಯಮ ಶಾಲೆಗಳನ್ನು ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು.

ಅದಕ್ಕೆ ತಜ್ಞರ ಸಭೆ ಕರೆಯಬೇಕು. ಆಂಗ್ಲ ಮಾಧ್ಯಮ ಶಾಲೆಗಳೊಂದಿಗೆ ಸ್ಫರ್ಧಿಸುವ ಮಟ್ಟಕ್ಕೆ ಸರಕಾರಿ ಶಾಲೆಯ ಸೌಲಭ್ಯ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಬೇಕು. ಆ ಮೂಲಕ ರಾಜ್ಯದ ತಳಸ್ತರದ ಬಡ ಕುಟುಂಬದ ಮಕ್ಕಳೂ ಗುಣಮಟ್ಟದ ಆಧುನಿಕ ಶಿಕ್ಷಣ ಪಡೆಯುವಂತಾಗಬೇಕು ಎಂದು ಸಚಿವರ ಗಮನಕ್ಕೆ ತಂದರು.

ಅಖಿಲ ಭಾರತ ಇಸ್ಲಾಮಿಕ್ ಶಿಕ್ಷಣ ಮಂಡಳಿಯ ಕರ್ನಾಟಕ ನಿರ್ದೇಶಕ ಸೈಯದ್ ತನ್ವೀರ್ ಹಾಶ್ಮಿ ಬಿಜಾಪುರ, ಅಧ್ಯಕ್ಷ ಎಸ್.ಎಸ್.ಎ. ಖಾದರ್, ಕೋಶಾಧಿಕಾರಿ ಅನ್ವರ್ ಶರೀಫ್ ಬೆಂಗಳೂರು ಮತ್ತಿತರರು ಜೊತೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News