×
Ad

ಪ್ರತ್ಯೇಕ ಪ್ರಕರಣ: ಹಲವರ ಬಂಧನ

Update: 2016-07-13 22:18 IST

ತರೀಕೆರೆ, ಜು.13: ತರೀಕೆರೆ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಲಿಂಗದಹಳ್ಳಿ ರಸ್ತೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಮುಸ್ತಫಾ (24) ಎಂಬವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಆತನಿಂದ 1,320 ರೂ.ನಗದು, ವಶಪಡಿಸಿಕೊಂಡಿರುತ್ತಾರೆ. ಇನ್ನೊಂದು ಪ್ರಕರಣದಲ್ಲಿ ತರೀಕೆರೆ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಗಾಳಿಹಳ್ಳಿ ಕ್ರಾಸ್ ಹತ್ತಿರ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಸೋಮಶೇಖರ್ (29) ಎಂಬವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ಆತನಿಂದ 1,415 ರೂ. ನಗದು ವಶಪಡಿಸಿಕೊಂಡಿರುತ್ತಾರೆ. ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

<ಬೀರೂರು: 

ಇಲ್ಲಿನ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಕೆ.ಹೊಸೂರು ಗ್ರಾಮಕ್ಕೆ ಹೋಗುವ ಕಚ್ಚಾ ರಸ್ತೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಗೋವಿಂದ(26), ಹಾಲಪ್ಪ(41),ರವಿಕುಮಾರ್ (30), ತಿಪ್ಪೇಶ (26), ಮತ್ತು ಭೀಮಣ್ಣ (55) ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು 880 ರೂ. ನಗದು ವಶಪಡಿಸಿಕೊಂಡಿರುತ್ತಾರೆ. ಈ ಸಂಬಂಧ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಜ್ಜಂಪುರ: ಅಜ್ಜಂಪುರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಏರಿಯ ಪಕ್ಕದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಮಧು(25), ಮಹೇಂದ್ರ (32),ರುದ್ರಪ್ಪ(46), ಏಕಾಂತ(32), ಗಂಗಾಧರಪ್ಪ(44), ಕಿರಣ್(19),ರಾಜಶೇಖರ (42), ಮತ್ತು ಮಂಜಪ್ಪ(50) ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಅವರಿಂದ 1,290 ರೂ. ನಗದು ವಶಪಡಿಸಿಕೊಂಡಿರುತ್ತಾರೆ. ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News