ಭಟ್ಕಳ: ಜು.16 ರಂದು ಶಿಕ್ಷಕರಿಗಾಗಿ ಈದ್ ಮಿಲನ್
ಭಟ್ಕಳ, ಜು.13: ಇಲ್ಲಿನ ತರಬಿಯತ್ ಎಜುಕೇಶನ್ ಸೊಸೈಟಿ ಶಿಕ್ಷಣ ಸಂಸ್ಥೆಯ ನ್ಯೂ ಶಮ್ಸ್ ಸ್ಕೂಲ್ ಭಟ್ಕಳ, ಆಲ್‌ಇಂಡಿಯಾ ಐಡಿಯಲ್‌ಟೀಚರ್ಸ್ ಅಸೋಸಿಯೇಶನ್(ರಿ) ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ಹಾಗೂ ಕಾಲೇಜು ಉಪನ್ಯಾಸಕರಿಗಾಗಿ ಈದ್ ಸೌಹಾರ್ದ ಭೋಜನಕೂಟವನ್ನು ಜು.16 ರಂದು ಶನಿವಾರ ಜಾಮಿಯಾಬಾದ್ ನ್ಯೂ ಶಮ್ಸ್ ಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಜಮಾಅತೆಇಸ್ಲಾಮಿ ಹಿಂದ್‌ನ ಕಾರ್ಯದರ್ಶಿ ಹಾಗೂ ಲೆಕ್ಕ ಪರಿಶೋಧಕ ಸಿ.ಎ ಮುಹಮ್ಮದ್ ಇಸಾಕ್ ಪುತ್ತೂರು ಕೆ.ಪಿ.ವಹಿಸಲಿದ್ದಾರೆ. ಮುಖ್ಯಅತಿಥಿಯಾಗಿ ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಮಾಂಕಾಳು ಎಸ್.ವೈದ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಪಟಗಾರ, ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷ ಗಂಗಾಧರ್ ನಾಯ್ಕ ಭಾಗವಹಿಸುತ್ತಿದ್ದು, ಗೌರವ ಅತಿಥಿಗಳಾಗಿ ಅಬ್ದುರ್ರಹೀಂ ಜುಕಾಕು, ಮೂರ್ತಿ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯ ಭಟ್ಕಳದ ಪ್ರಾಂಶುಪಾಲ ಡಾ.ಆರ್.ನರಸಿಂಹ, ರು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಭಟ್ಕಳದ ಅಧ್ಯಕ್ಷ ಶಂಕರ್ ನಾಯ್ಕ, ಭಟ್ಕಳ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ನಾಯ್ಕ, ಕ್ಷೇತ್ರ ಸಂಪನ್ಮೂಲ ಕೇಂದ್ರ ಭಟ್ಕಳ ಸಂಯೋಜಕ ವಿ.ಡಿ.ಮೊಗೇರ್, ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಅಳ್ವೆಕೋಡಿಯ ಮುಖ್ಯಾಧ್ಯಾಪಕ ಕೆ.ಬಿ.ಮಡಿವಾಳ ಉಪಸ್ಥಿತರಿರುವರು.
ಮದ್ಯಾಹ್ನ 1ಗಂಟೆಯಿಂದ 2 ಗಂಟೆವರೆಗೆ ಸೌಹಾರ್ದ ಭೋಜನ ನಡೆಯಲಿದ್ದು 2ಗಂಟೆಯಿಂದ 2:30ರವರೆಗೆ ಸಭಾ ಕಾರ್ಯಕ್ರಮ ಜರಗಲಿರುವುದು ಎಂದು ಸಂಘಟಕರಾದ ತಲ್ಹಾ ಸಿದ್ದಿಬಾಪ, ಮುಜಾಹಿದ್ ಮುಸ್ತಫಾ ಹಾಗೂ ಎಂ.ಆರ್.ಮಾನ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.