×
Ad

ಅಂಧ ಮಕ್ಕಳ ಶಾಲೆಯಲ್ಲಿ ಸಿಹಿ ಭೋಜನ ವ್ಯವಸ್ಥೆ

Update: 2016-07-16 22:37 IST

ಕಡೂರು, ಜು.16: ವೈಕುಂಠ ಏಕಾದಶಿ ಹಬ್ಬದ ಪ್ರಯುಕ್ತ ಪಟ್ಟಣದ ಶ್ರೀ ವೆಂಕಟೇಶ್ವರ ದೇವಾಲಯದ ಸಲಹಾ ಸಮಿತಿ ಮತ್ತು ಟ್ರಸ್ಟ್ ವತಿಯಿಂದ ಸಮಿತಿಯ ಅಧ್ಯಕ್ಷ ಡಿ.ಕೃಷ್ಣಮೂರ್ತಿಯವರ ನೇತೃತ್ವದಲ್ಲಿ ಅಂಧ ಮಕ್ಕಳ ಶಾಲೆಯಲ್ಲಿ ಸಿಹಿ ಭೋಜನ ವ್ಯವಸ್ಥೆ ಮಾಡಲಾಯಿತು.

  ಶುಕ್ರವಾರ ರಾತ್ರಿ ಅಂಧ ಮಕ್ಕಳ ಶಾಲೆಗೆ ತೆರಳಿ ಸುಮಾರು 200ಕ್ಕೂ ಹೆಚ್ಚಿನ ಮಕ್ಕಳಿಗೆ ಸಿಹಿ ಊಟ ನೀಡಲಾಗಿದ್ದು, ಈ ಸಂದರ್ಭ ಸಮಿತಿ ಅಧ್ಯಕ್ಷ ಡಿ. ಕೃಷ್ಣಮೂರ್ತಿ ಪತ್ರಿಕೆಯೊಂದಿಗೆ ಮಾತನಾಡಿ, ಅಂಗವಿಕಲ ಹಾಗೂ ನಿರ್ಗತಿಕ ಮಕ್ಕಳಿಗೆ ಹಬ್ಬ ಹರಿ ದಿನಗಳಲ್ಲಿ ಸಂಘ-ಸಂಸ್ಥೆಗಳು, ಸಮಾಜ ಸೇವಕರು ಮಕ್ಕಳಿಗೆ ಸಿಹಿ ನೀಡಿ ಅವರೊಂದಿಗೆ ಕೆಲವು ಗಂಟೆಗಳ ಕಾಲ ಕಳೆದರೆ ಅವರಿಗೂ ಒಂದಿಷ್ಟು ಸಂತಸವಾಗುತ್ತದೆ. ನಮಗೆಲ್ಲರಿಗೂ ಒಂದು ರೀತಿ ನೆಮ್ಮದಿ ದೊರಕುತ್ತದೆ ಎಂದರು.

ಆದ್ದರಿಂದ ಇಂತಹ ಮಕ್ಕಳನ್ನು ನಮ್ಮ ಟ್ರಸ್ಟ್ ಗುರುತಿಸಿ ಭೋಜನ ನೀಡಿರುವುದು ತುಂಬ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇಂತಹ ಮಕ್ಕಳ ಶ್ರೇಯೋಭಿವೃದ್ಧಿಗೆ ಜಾತಿ, ಮತ ಭೇದ ಮರೆತು ಎಲ್ಲರು ಶ್ರಮಿಸೋಣ ಎಂದರು.

ಈ ಸಂದರ್ಭ ದೇವಾಲಯ ಸಮಿತಿಯ ಸಮಿತಿಯ ಸದಸ್ಯರಾದ ಬಾಲಕೃಷ್ಣಶೆಟ್ಟಿ, ಕೆ.ಜಿ. ಶ್ರೀನಿವಾಸ್, ಬರಮಪ್ಪ ದಂಡವತಿ, ಎಂ.ಟಿ.ಹನುಮಂತಪ್ಪ, ಎಂ.ಎಸ್.ಶ್ರೀವತ,್ಸ ಕೆ.ಎಸ್. ಶ್ರೀನಿವಾಸ್‌ಮೂರ್ತಿ, ತಿಮ್ಮಪ್ಪ, ರಾಜೇಶ್, ಪ್ರಶಾಂತ್, ಚಂದ್ರಪ್ಪ ಮತ್ತು ನಂಜುಂಡಸ್ವಾಮಿ, ಪುಷ್ಪಾಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News