×
Ad

ಉತ್ತಮ ಸಮಾಜ ನಿರ್ಮಾಣಕ್ಕೆ ಜೋಡಿಸಲು ಡಾ. ನಾಯ್ಕ ಕರೆ

Update: 2016-07-16 22:38 IST

ಅಂಕೋಲಾ, ಜು.16: ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕಾದ ಅಗತ್ಯವಿದೆ. ರೋಟರಿ ಕ್ಲಬ್ ಹಲವು ದಶಕಗಳಿಂದ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಹಲವು ವಿದಾಯಕ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿರುವುದು ಶ್ಲಾಘನೀಯ ಎಂದು ವೈದ್ಯ ಡಾ.ಡಿ.ಡಿ. ನಾಯ್ಕ ಅಭಿಪ್ರಾಯಪಟ್ಟರು.

ಪಟ್ಟಣದ ಕಾಮತ ಪ್ಲಸ್ ಹೊಟೇಲ್‌ನ ಸಭಾಭವನದಲ್ಲಿ ಇತ್ತೀಚಿಗೆ ನಡೆದ ಅಂಕೋಲಾ ರೋಟರಿ ಕ್ಲಬ್‌ನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು. ಅಂಕೋಲಾ ರೋಟರಿ ಕ್ಲಬ್ ತನ್ನದೇ ಆದ ಮಹತ್ವವನ್ನು ಹೊಂದಿದ್ದು, ನೊಂದವರಿಗೆ ಅಶಾಕಿರಣವಾಗಿದೆ ಎಂದರು.

ಅಸಿಸ್ಟಂಟ್ ಗವರ್ನರ್ ಜಯಶ್ರೀ ಕಾಮತ, ನ್ಯಾಯವಾದಿ ನಾಗರಾಜ ನಾಯಕ ಮಾತನಾಡಿದರು. ನಾರಾಯಣ ಡಿ. ನಾಯಕ ಅಧ್ಯಕ್ಷರಾಗಿ, ವಿನೋದ ಶಾನಭಾಗ ಕಾರ್ಯದರ್ಶಿಯಾಗಿ, ಸುಹಾಸ ಶೆಟ್ಟಿ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಪರಿಸರ ಪ್ರೇಮಿ ತುಳಸಿ ಗೌಡ ಅವರನ್ನು ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ನಿಕಟಪೂರ್ವ ಅಧ್ಯಕ್ಷ ವಿ.ಆರ್. ವೆರ್ಣೇಕರ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಕಾಂತ ಜಿ. ನಾಯ್ಕ ವರದಿ ವಾಚಿಸಿದರು. ನ್ಯಾಯಾವಾದಿ ಸುಭಾಸ ನಾರ್ವೇಕರ್ ತುಳಸಿ ಗೌಡ ಅವರನ್ನು ಪರಿಚಯಿಸಿದರು. ರೋಟರಿ ಸದಸ್ಯ ಪ್ರವೀಣ ನೂತನ ಸದಸ್ಯರ ಯಾದಿ ಓದಿದರು. ಡಾ. ಅವಿನಾಶ ತಿನೈಕರ್ ನಿರ್ವಹಿಸಿದರು. ನೂತನ ಕಾರ್ಯದರ್ಶಿ ವಿನೋದ ಶಾನಭಾಗ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News