×
Ad

ದಾವಣಗೆರೆ: ತರಬೇತಿ ಕಾರ್ಯಾಗಾರ

Update: 2016-07-19 23:03 IST

  ದಾವಣಗೆರೆ, ಜು.19: ಬೆಂಗಳೂರಿನಲ್ಲಿ ಸೌಹಾರ್ದ ಕಟ್ಟಡ ನಿರ್ಮಿಸಲು ನಿವೇಶನವನ್ನು ಖರೀದಿಸಲಾಗಿದೆ. ಇದರಿಂದ ಸಹಕಾರಿ ಕ್ಷೇತ್ರ ವಲಯದಲ್ಲಿನ ಸಮಸ್ಯೆಗಳ ನಿವಾರಣೆಯಾಗಲಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಗುರುನಾಥ ಭರವಸೆ ವ್ಯಕ್ತಪಡಿಸಿದ್ದಾರೆ..

ನಗರದ ಜನತಾ ಬಝಾರ್ ಸಭಾಂಗಣದಲ್ಲಿ ಇತ್ತೀಚೆಗೆ ಸಹಕಾರ ಸಂಘಟನೆಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಆಯೋಜಿಸಿದ್ದ ಗುಣಮಟ್ಟದ ನಿರ್ವಹಣೆ ಹಾಗೂ ಅಧಿಪ್ರೇರಣೆ ಕುರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ಸೌಹಾರ್ದ ಸಹಕಾರಿ ನಿಗಮಗಳು ಕ್ರೀಯಾಶೀಲವಾಗಿ ಕೆಲಸ ನಿರ್ವಹಿಸುತ್ತಿದ್ದು, ಈಗಾಗಲೇ 3,700 ಸೌಹಾರ್ದ ಸಹಕಾರಿ ನಿಗಮಗಳು, 60ಕ್ಕೂ ಹೆಚ್ಚು ಬಗೆಯ ಉದ್ಯೋಗ ಒಳಗೊಂಡಿದೆ. ರಾಜ್ಯದಲ್ಲಿ ಪದವಿ ಮುಗಿಸಿಕೊಂಡಿರುವ ಯುವಕರಿಗೆ ಉದ್ಯೋಗಗಳನ್ನು ನೀಡುವಲ್ಲಿ ಮತ್ತು ಸ್ವ ಉದ್ಯೋಗ ಮಾಡುವವರಿಗೆ ಸಹಕಾರವನ್ನು ಮಾಡಲಾಗುತ್ತಿದೆ ಎಂದರು. ಹರಿಹರ ದಾವಣಗೆರೆ ಅರ್ಬನ್ ಬ್ಯಾಂಕ್ ಅಧ್ಯಕ್ಷ ಆರಾಧ್ಯಾ ಮಾತನಾಡಿ, ಸೌಹಾರ್ದ ನಿಗಮದಲ್ಲಿ ದಿನೇ ದಿನೇ ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಇನ್ನೂ ಹೆಚ್ಚಿನದಾಗಿ ಯುವಕರಿಗೆ ಪ್ರೇರಣೆ ನೀಡಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಚಾರವನ್ನು ಮಾಡಬೇಕಾಗಿದೆ ಎಂದ ಅವರು, ಬ್ರಿಟೀಷರ ಕಾಲದಲ್ಲಿ ಆರಂಭಗೊಂಡ ಸಹಕಾರ ಕ್ಷೇತ್ರಗಳು ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಜಿ. ನಂಜನಗೌಡ, ಎನ್.ಸುರೇಶ್, ಕ್ಷಮತಾ, ಕಲ್ಲೇಶ್, ಜಿ.ಎಸ್.ಹರೀಶ್, ವಿಜಯ್, ಎನ್. ಸುರೇಶ್, ಉಮೇಶ್ ಶೆಟ್ಟಿ, ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News