ರಾಜ್ಯದ ಗಮನ ಸೆಳೆದ ಶಿಶಿವಮೊಗ್ಗ ಜಿಲ್ಲಾಡಳಿತ
<ಬಿ. ರೇಣುಕೇಶ್
ಶಿವಮೊಗ್ಗ, ಜು. 19: ಕಾಲಮಿತಿಯಲ್ಲಿ ಸರಕಾರದ ವಿವಿಧ ಯೋಜನೆಗಳ ಅನುಷ್ಠಾನ ಹಾಗೂ ಕಡತ ವಿಲೇವಾರಿ ಪ್ರಕ್ರಿಯೆಯ ಪರಿಣಾಮದಿಂದ ಸರಕಾರದ ಮೂರು ಪ್ರಮುಖ ಯೋಜನೆಗಳ ಅನುಷ್ಠಾನ ಪ್ರಕ್ರಿಯೆಯಲ್ಲಿ ಶಿವಮೊಗ್ಗ ಜಿಲ್ಲೆ ಉತ್ತಮ ರ್ಯಾಂಕಿಂಗ್ ಪಡೆದುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸ್ತುತ ವರ್ಷ ಗಮನಾರ್ಹ ಸಾಧನೆ ಮಾಡುವ ಮೂಲಕ ರಾಜ್ಯದ ಗಮನ ಸೆಳೆದಿದೆ. ಕಳೆದ ವರ್ಷ ‘ಸಕಾಲ’ ಯೋಜನೆಯಲ್ಲಿ ಜಿಲ್ಲೆ 28ನೆ ರ್ಯಾಂಕ್, ‘ಭೂಮಿ’ ಯೋಜನೆಯಲ್ಲಿ 20 ನೆ ರ್ಯಾಂಕ್ ಹಾಗೂ ‘ಅಟಲ್‌ಜೀ’ ಯೋಜನೆಯಲ್ಲಿ 22 ನೆ ರ್ಯಾಂಕ್ ಪಡೆದು ಕೊಂಡಿತ್ತು. ಆದರೆ, ಪ್ರಸ್ತುತ ವರ್ಷದಲ್ಲಿ ರಾಜ್ಯ ಸರಕಾರ ಬಿಡುಗಡೆ ಮಾಡಿರುವ ರ್ಯಾಂಕಿಂಗ್ ಪಟ್ಟಿಯಲ್ಲಿ ‘ಸಕಾಲ’ಯೋಜನೆಯಲ್ಲಿ ಶಿವಮೊಗ್ಗ ಜಿಲ್ಲೆ 5 ನೆ ರ್ಯಾಂಕ್ ಪಡೆದರೆ, ‘ಭೂಮಿ’ ಯೋಜನೆಯಲ್ಲಿ 3 ನೆ ರ್ಯಾಂಕ್ ಹಾಗೂ ಅಟಲ್‌ಜೀ ಯೋಜನೆಯಲ್ಲಿ 12 ನೆ ರ್ಯಾಂಕ್ ಪಡೆದುಕೊಳ್ಳುವ ಮೂಲಕ ಈ ವರೆಗೆ ಶಿವಮೊಗ್ಗ ಜಿಲ್ಲಾಡಳಿತ ಕಂಡರಿಯದ ಸಾಧನೆ ಮಾಡಿ ಜನರ ಪ್ರಶಂಸೆಗೆ ಪಾತ್ರವಾಗಿದೆ. ಕಾಲಮಿತಿಯಲ್ಲಿ ಕಡತಗಳ ವಿಲೇವಾರಿ ಮಾಡದಿರುವುದು, ಕೆಲ ತಾಲೂಕು ಆಡಳಿತ - ಇಲಾಖೆಗಳ ನಿರ್ಲಕ್ಷ್ಯ, ಯೋಜನೆಗಳ ಪರಿಣಾಮಕಾರಿ ಅನುಷ್ಠಾನಗೊಳಿಸದಿರುವುದರ ಪರಿಣಾಮದಿಂದ ಜಿಲ್ಲೆಯು ರ್ಯಾಂಕಿಂಗ್ ಪಟ್ಟಿಯಲ್ಲಿ ಹಿಂದುಳಿಯುವಂತಾಗುತ್ತಿತ್ತು ಎಂದು ಜಿಲ್ಲಾಡಳಿತದ ಅಧಿಕಾರಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಬದಲಾದ ವಾತಾವರಣ: ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿಯವರು ಮೂರು ಯೋಜನೆಗಳ ಅನುಷ್ಠಾನದಲ್ಲಿ ವಿಳಂಬಕ್ಕೆ ಆಸ್ಪದ ನೀಡದಂತೆ ಎಚ್ಚರವಹಿಸಿದ್ದು, ಕಾಲಕಾಲಕ್ಕೆ ತಾಲೂಕು ಆಡಳಿತ ಹಾಗೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ನಿಯಮಿತವಾಗಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ನಡೆಸಿಕೊಂಡು ಬರುತ್ತಿರುವ ಪರಿಣಾಮ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.
ಅಲ್ಲದೆ, ಈ ಹಿಂದೆ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಉಪ ಆಯುಕ್ತರಾಗಿ ನೇರ-ನಿರ್ಭೀತ ಕಾರ್ಯವೈಖರಿಯ ಮೂಲಕ ಗಮನ ಸೆಳೆದಿದ್ದ ಕೆ. ಚನ್ನಬಸಪ್ಪರವರು ಅಪರ ಜಿಲ್ಲಾಧಿಕಾರಿಯಾಗಿ ಆಗಮಿಸಿದ ಕೆಲವೇ ತಿಂಗಳುಗಳಲ್ಲಿ ಯೋಜನೆಗಳ ಅನುಷ್ಠಾನ ಹಾಗೂ ಕಡತಗಳ ವಿಲೇವಾರಿಯಲ್ಲಿ ಆಮೂಲಾಗ್ರ ಬದಲಾವಣೆ ತಂದಿದ್ದಾರೆ. ತಾಲೂಕು ಆಡಳಿತ ಹಾಗೂ ಇಲಾಖಾಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ‘ಯೋಜನೆಗಳ ಅನುಷ್ಠಾನ, ಕಡತ ವಿಲೇವಾರಿಯಲ್ಲಿ ವಿಳಂಬ ತೋರುವ ಅಧಿಕಾರಿಗಳಿಗೆ ಕೆ. ಚನ್ನಬಸಪ್ಪರವರು ಚಾಟಿ ಬೀಸುವ ಕೆಲಸ ಮಾಡುತ್ತಿದ್ದರು. ಹಲವರಿಗೆ ಜಿಲ್ಲಾಧಿಕಾರಿಗಳ ಮೂಲಕ ಶೋಕಾಸ್ ನೋಟಿಸ್ ಜಾರಿಗೊಳಿಸಿ, ಅಮಾನತುಗೊಳಿಸುವ ಎಚ್ಚರಿಕೆಯನ್ನು ನೀಡಿದ್ದ ಕಾರಣ ಈ ಮಟ್ಟದ ಸಾಧನೆ ಮಾಡುವಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೆ ‘ಸಕಾಲ’, ‘ಭೂಮಿ’ ಹಾಗೂ ‘ಅಟಲ್ ಜೀ’ ಯೋಜನೆಗಳ ಅನುಷ್ಠಾನದಲ್ಲಿ ಶಿವಮೊಗ್ಗ ಜಿಲ್ಲಾಡಳಿತವು ಉತ್ತಮ ಸಾಧನೆ ಮಾಡುವ ಮೂಲಕ ಜನರ ಗಮನ ಸೆಳೆದಿದೆ. ಮುಂದಿನ ದಿನಗಳಲ್ಲಿ ಯೋಜನೆಗಳ ಅನುಷ್ಠಾನದಲ್ಲಿ ಇಡೀ ದೇಶಕ್ಕ್ಕೆ ಪ್ರಥಮ ಸ್ಥಾನ ಗಳಿಸುವ ಗುರಿಯಿಟ್ಟು ಕೆಲಸ ಮಾಡುವಂತಾಗಲೀ ಎಂದು ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಪೊನ್ನುರಾಜ್ ದಾಖಲೆ ಬ್ರೇಕ್ ಮಾಡಲಿದ್ದಾರಾ ಕೆ.ಚನ್ನಬಸಪ್ಪ?:
ಈ ಹಿಂದಿನ ಜಿಲ್ಲಾಧಿಕಾರಿ ವಿ. ಪೊನ್ನುರಾಜ್‌ರವರು ಕರ್ತವ್ಯದ ಅವಧಿ ಪೂರ್ಣಗೊಂಡ ನಂತರವು ಡಿ.ಸಿ. ಕಚೇರಿ ಯಲ್ಲಿದ್ದು ಕೆಲಸ ಮಾಡುತ್ತಿದ್ದರು. ಕೆಲವೊಮ್ಮೆ ತಡರಾತ್ರಿ ವರೆಗೆ ಕಾರ್ಯನಿರ್ವಹಣೆ ಮಾಡುವ ಮೂಲಕ ಗಮನ ಸೆಳೆಯು ತ್ತಿದ್ದರು. ಎಷ್ಟೇ ಕಾರ್ಯ ದೊತ್ತಡವಿದ್ದರೂ ತಮ್ಮ ಹಂತದಲ್ಲಿ ಯಾವುದೇ ಕಡತಗಳು ಬಾಕಿ ಉಳಿಯದಂತೆ ಕ್ರಮ ಜರಗಿಸಿದ್ದರು. ಇವರಂತೆಯೇ ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪನವರು ಕಾರ್ಯನಿರ್ವಹಿಸುತ್ತಿದ್ದು, ಪೊನ್ನುರಾಜ್ ಅವರ ದಾಖಲೆ ಮುರಿಯ ಲಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಬರುತ್ತಿವೆ. 30 ಅಧಿಕಾರಿಗಳಿಗೆ ಶೋಕಾಸ್ ನೋಟಿಸ್...! : ಕಾಲಮಿತಿಯಲ್ಲಿ ‘ಸಕಾಲ’, ‘ಭೂಮಿ’ ಹಾಗೂ ‘ಅಟಲ್ ಜೀ’ ಯೋಜನೆಗಳ ಅನುಷ್ಠಾನಗೊಳಿಸದ ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳ 30 ಅಧಿಕಾ ರಿಗಳಿಗೆ ಜಿಲ್ಲಾಡಳಿತವು ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ವಿಳಂಬಕ್ಕೆ ಕಾರಣವಾದ ಅಂಶಗಳ ಬಗ್ಗೆ ಸವಿವರವಾದ ಮಾಹಿತಿ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ ಎಂದು ಜಿಲ್ಲಾಡಳಿತದ ಉನ್ನತ ಮೂಲಗಳು ಮಾಹಿತಿ ನೀಡಿವೆ. ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿಯವರ ಸೂಚನೆಯ ಮೇರೆಗೆ ಅಪರ ಡಿಸಿ ಕೆ.ಚನ್ನಬಸಪ್ಪನವರು ಈ ಶೋಕಾಸ್ ನೋಟಿಸ್ ಜಾರಿಗೊ ಳಿಸುತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ತಾಲೂಕು ಆಡಳಿತ ಹಾಗೂ ಅಧಿಕಾರಿಗಳು ವಿಳಂ ಬಕ್ಕೆ ಆಸ್ಪದ ನೀಡದೆ ಕಡತಗಳ ವಿಲೇವಾರಿ ಮಾಡುತ್ತಿ ದ್ದಾರೆ. ಇದರಿಂದ ನಾಗರಿ
ರು ಸರಕಾರಿ ಕಚೇರಿಗೆ ಅಲೆದಾಡುವುದು ತಪ್ಪುತ್ತಿದೆ.