×
Ad

476.30 ಲಕ್ಷ ರೂ. ವೆಚ್ಚದ ಕ್ರಿಯಾ ಯೋಜನೆಗೆ ಜಿಪಂ ಅಸ್ತು

Update: 2016-07-19 23:08 IST

ಶಿವಮೊಗ್ಗ, ಜು. 19: ಜಿಲ್ಲಾ ಪಂಚಾಯತ್‌ನ ವೃತ್ತಿ ಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣ ವಿತರಿಸ ಲಾಗುತ್ತಿದ್ದ ಯೋಜನೆಯ ಭಾಗವಾಗಿ ಟೈಲರಿಂಗ್ ಮಿಷನ್ ವಿತರಿಸುತ್ತಿದ್ದ ಜಿಪಂ ಪ್ರಸ್ತುತ ವರ್ಷದಿಂದ ‘ಬಡಗಿ ಕಿಟ್’ ನೀಡುವ ಬಗ್ಗೆ ಮತ್ತು ವಿವಿಧ ಇಲಾಖೆಗಳ ಸುಮಾರು 476.30 ಲಕ್ಷ ರೂ. ಮೊತ್ತದ ಕ್ರಿಯಾ ಯೋಜನೆಗೆ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅನುಮೋದನೆ ನೀಡಿದೆ.

ಮಂಗಳವಾರ ನಗರದ ಜಿಪಂ ಕಚೇರಿಯ ಕೊಡಚಾದ್ರಿ ಸಭಾಂಗಣದಲ್ಲಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷೆ ಕಲ್ಪನಾ ಪದ್ಮನಾಭ ಹಾರೋಗೊಳಿಗೆಯವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಇಲಾಖೆಯ ಮೂಲಕ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ. ವೃತ್ತಿಪರ ಬಡಗಿ ಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ‘ಬಡಗಿ ಕಿಟ್’ನೀಡುವ ನಿರ್ಧಾರ ಮಾಡಲಾಗಿದೆ. ಬಡಗಿ ವೃತ್ತಿಗೆ ಅಗತ್ಯ ಸಲಕರಣೆಗಳಾದ ವುಡನ್ ಕಟಿಂಗ್ ಮಿಷನ್ ಹಾಗೂ ಕ್ಲಾಂಪ್‌ಗಳು ಈ ಕಿಟ್‌ನಲ್ಲಿರುತ್ತವೆ. ಒಟ್ಟಾರೆ ಈ ಸಲಕರಣೆಗಳ ಮೊತ್ತ 5 ಸಾವಿರ ರೂ. ಆಗಿರುತ್ತದೆ. ಇದಕ್ಕಾಗಿ 9.50 ಲಕ್ಷ ರೂ. ಮೀಸಲಿರಿಸಲಾಗಿದೆ ಎಂದು ಸಭೆಗೆ ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದರು. ನೆಡುತೋಪು: ಸಾಮಾಜಿಕ ಅರಣ್ಯ 

ವಿಭಾಗದ ಚರ್ಚೆಯ ವೇಳೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 20 ಹಳೇಯ ನೆಡು ತೋಪು ಕಟಾವಿಗೆ ಅನುಮೋದನೆ ದೊರಕಿದೆ. 4 ನೆಡುತೋಪು ಕಟಾವಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಸಮಿತಿಯ ಸದಸ್ಯ ತಮ್ಮಡಿ ಹಳ್ಳಿ ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ ಅಕೇಶಿಯಾ ಹಾಗೂ ನೀಲಗಿರಿ ಮರಗಳ ಬೆಳವಣಿಗೆಗೆ ನಿರ್ಬಂಧ ಹೇರಲಾಗಿದೆ. ಆದಾಗ್ಯೂ ಅಕೇಶಿಯಾ ಹಾಗೂ ನೀಲಗಿರಿ ಮರಗಳನ್ನು ಬೆಳೆಸುತ್ತಿರುವುದೇಕೆ ಎಂದು ಪ್ರಶ್ನಿಸಿದರು. ಇದಕ್ಕೆ ರವಿಕುಮಾರ್‌ರವರು ಪ್ರತಿಕ್ರಿಯೆ ನೀಡಿ, ಹೆಚ್ಚಿನ ಮಳೆ ಬೀಳುವ ಪ್ರದೇಶಗಳಲ್ಲಿ ನೀಲಗಿರಿ ಮರ ಬೆಳೆಸುವುದರ ಮೇಲೆ ನಿರ್ಬಂಧ ಹೇರಲಾಗಿದೆ. ಆದರೆ ಆಕೇಶಿಯಾಕ್ಕಿದ್ದ ನಿರ್ಬಂಧ ಸಡಿಲಿಸಲಾಗಿದೆ. ಅಕೇಶಿಯಾ ಮರಗಳನ್ನು ಪೀಠೋ ಪಕರಣ, ಟಿಂಬರಿಂಗ್‌ಗೆ ಬಳಕೆ ಮಾಡುವುದರಿಂದ ಹೆಚ್ಚು ಬೇಡಿಕೆಯಿದೆ ಎಂದು ಉತ್ತರಿಸಿದರು.

ತಮ್ಮಡಿಹಳ್ಳಿ ನಾಗರಾಜ್ ಮಾತನಾಡಿ, ಮೀನು ಸಾಕಣೆಗೆ ಕೆರೆ ಗುತ್ತಿಗೆ ಪಡೆಯುವವರು ಹೆಚ್ಚಿನ ಮೊತ್ತಕ್ಕೆ ಬೇರೆಯವರಿಗೆ ಉಪ ಗುತ್ತಿಗೆ ನೀಡುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕೆರೆಗಳಿದ್ದ ಸ್ಥಳದಲ್ಲಿಯೇ ಹರಾಜು ಪ್ರಕ್ರಿಯೆ ನ ಡೆಸಿ. ಇದರಿಂದ ಪ್ರಾಮಾಣಿಕವಾಗಿ ಮೀನು ಹಿಡಿಯುವ ವೃತ್ತಿ ಮಾಡುವವರು ಕೆರೆ ಗುತ್ತಿಗೆ ಹಿಡಿಯಲು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು. ಎನ್‌ಆರ್‌ಇಜಿಯಡಿ ರೈತರಿಗೆ

 ಉಪಯುಕ್ತ ವಾದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅಡಿಕೆ ತೋಟಗಳ ಅಭಿವೃದ್ಧಿಗೂ ಅವಕಾಶ ಕಲ್ಪಿಸಲಾಗುತ್ತಿದೆ. ಕಾಲಮಿತಿಯಲ್ಲಿ ಸೌಲಭ್ಯ ತಲುಪಿ ಸುವ ಕೆಲಸನಡೆಯಬೇಕಿದೆ ಎಂದು ಸದಸ್ಯ ಕಾಗೋಡು ಅಣ್ಣಪ್ಪಸಬೆಯನ್ನು ಆಗ್ರಹಿಸಿದರು. ಸಭೆಯಲ್ಲಿ ಕಾರ್ಯದರ್ಶಿ ಹಾಗೂ ಜಿಪಂ ಕಚೇರಿಯ ಯೋಜನಾ ನಿರ್ದೇಶಕ ಎಸ್.ಬಿ. ರವಿಕುಮಾ ರ್, ಸದಸ್ಯರಾದ ರಾಜೇಶ್ವರಿ ಗಣಪತಿ ಎಚ್., ನರಸಿಂಗನಾಯ್ಕಿ, ಎಸ್. ಅಕ್ಷತಾ, ಎಂ.ಇ. ರೇಣುಕಾ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

476.30 ಲಕ್ಷ ರೂ. ಮೊತ್ತದ ಕ್ರಿಯಾ ಯೋಜನೆ...

2016-17 ನೇ ಸಾಲಿನಲ್ಲಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯಡಿ ದೊರೆಯುವ 10 ಇಲಾಖೆಗಳ ಸುಮಾರು 476.30 ಲಕ್ಷ ರೂ. ಮೊತ್ತದ ಕ್ರಿಯಾ ಯೋಜನೆಗೆ ಸಭೆ ಅನುಮೋದನೆ ನೀಡಿತು. ಕೃಷಿ ಇಲಾಖೆಯ 75.95 ಲಕ್ಷ ರೂ., ತೋಟಗಾರಿಕೆ ಇಲಾಖೆಯ 109.41 ಲಕ್ಷ .ರೂ., ಸಹಕಾರಿ ಇಲಾಖೆಯ 11 ಲಕ್ಷ.ರೂ., ಪಶುಪಾಲನಾ ಇಲಾಖೆಯ 122.60 ಲಕ್ಷ.ರೂ., ಮೀನುಗಾರಿಕೆ ಇಲಾಖೆಯ 33 ಲಕ್ಷ.ರೂ., ಸಾಮಾಜಿಕ ಅರಣ್ಯ ವಿಭಾಗದ 63 ಲಕ್ಷ ರೂ., ಖಾದಿ - ಗ್ರಾಮೀಣ ಕೈಗಾರಿಕಾ ಇಲಾಖೆಯ 25 ಲಕ್ಷ.ರೂ., ರೇಷ್ಮೆ ಇಲಾಖೆಯ 15.30 ಲಕ್ಷ ರೂ., ಕೈಮಗ್ಗ ಇಲಾಖೆಯ 6 ಲಕ್ಷ.ರೂ., ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 15 ಲಕ್ಷ.ರೂ. ಮೊತ್ತದ ಕ್ರಿಯಾ ಯೋಜನೆಗೆ ಸಭೆಯಲ್ಲಿ ಅಂತಿಮ ಅನುಮೋದನೆ ದೊರಕಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News