ಕಾರವಾರ: ವಾರ್ತಾ ಭವನಕ್ಕೆ ವಾಹನ ನೀಡಲು ಮುಖ್ಯಮಂತ್ರಿಗೆ ಪತ್ರಕರ್ತರ ಮನವಿ
ಕಾರವಾರ, ಜು.20: ಇಲ್ಲಿನ ಪತ್ರಕರ್ತರ ಸಂಚಾರಕ್ಕೆ ಅನುಕೂಲವಾಗುವಂತಹ ವಾಹನವನ್ನು ವಾರ್ತಾಭವನಕ್ಕೆ ನೀಡಬೇಕೆಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಉತ್ತರ ಕನ್ನಡ ಘಟಕದ ಜಿಲ್ಲಾಧ್ಯಕ್ಷ ಕಡತೋಕ ಮಂಜು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಮುಖ್ಯಮಂತ್ರಿಗಳ ಜೊತೆ ಮಾತುಕತೆ ಕಾರ್ಯಕ್ರಮದಲ್ಲಿ ಕಾರವಾರ ವಾರ್ತಾ ಭವನದಲ್ಲಿರುವ ಪತ್ರಕರ್ತರು ಪ್ರವಾಸಕ್ಕೆ ಬಳಸುವ ವಾಹನ ತೀರಾ ಹಳೆಯದಾಗಿದ್ದು, ಪೂರ್ಣ ಕೆಟ್ಟು ನಿಂತಿದೆ. ಪತ್ರಕರ್ತರ ಅಧ್ಯಯನ ಪ್ರವಾಸಗಳಿಗೆ ತೆರಳಲು ವಾಹನ ಇಲ್ಲದಾಗಿದೆ. ಕಾರವಾರಕ್ಕೆ ಹದಿನೈದು ವರ್ಷಗಳ ಹಿಂದೆ ಸೆಕೆಂಡ್ ಹ್ಯಾಂಡ್ ವಾಹನ ನೀಡಲಾಗಿತ್ತು. ಆದರೆ ಈಗ ಆ ವಾಹನ ಪೂರ್ಣ ಕೆಟ್ಟು ನಿಂತಿದೆ. ನೂತನ ವಾಹನವನ್ನು ಪತ್ರಕರ್ತರ ಸಂಚಾರ ಅನುಕೂಲಕ್ಕೆ ನೀಡಬೇಕೆಂದು ಲಿಖಿತ ಮನವಿ ನೀಡಿದ್ದಾಗಿ ಮಂಜು ಕಡತೋಕ ತಿಳಿಸಿದ್ದಾರೆ. ಅಲ್ಲದೇ ಪತ್ರಿಕಾ ಭವನಕ್ಕೆ ಸರಕಾರ 25 ಲಕ್ಷ ರೂ. ಮಂಜೂರು ಮಾಡಿದೆ. ಕಳೆದ 9ವರ್ಷಗಳಿಂದ ಪತ್ರಿಕಾ ಭವನ ನಿರ್ಮಾಣ ಕಾರ್ಯ ಭೂಮಿ ಕಾರಣದಿಂದ ನನೆಗುದಿಗೆ ಬಿದ್ದಿದೆ. ಈ ಕಾರಣ ವಾರ್ತಾಭವನದ ಪಕ್ಕದ ಕಂದಾಯ ಭೂಮಿಯನ್ನು ಪತ್ರಿಕಾಭವನಕ್ಕೆ ಮಂಜೂರು ಮಾಡಬೇಕೆಂದು ಲಿಖಿತ ಮನವಿಯಲ್ಲಿ ಕೋರಲಾಗಿದೆ. ಪತ್ರಕರ್ತರ ಸಂಚಾರಕ್ಕೆ ನೂತನ ವಾಹನ ಶೀಘ್ರವಾಗಿ ಬರಲಿದೆ ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಉತ್ತರ ಕನ್ನಡ ಘಟಕ ತಿಳಿಸಿದೆ. ಈ ಸಂದಭರ್ದಲ್ಲಿ ಜಿಲ್ಲಾಧ್ಯಕ್ಷ ಕಡತೋಕ ಮಂಜು, ಪತ್ರಕರ್ತರಾದ ಅಚ್ಯುತ್‌ಕುಮಾರ್ ಯಲ್ಲಾಪುರ, ದಿನೇಶ ಯಲ್ಲಾಪುರ ಉಪಸ್ಥಿತರಿದ್ದರು.