ಮುಂಡಗೋಡ: ಕೆಸರುಗುಂಡಿಗಳಾಗಿ ಮಾರ್ಪಟ್ಟ ರಸ್ತೆಗಳು
Update: 2016-07-22 15:35 IST
ಮುಂಡಗೋಡ, ಜು.22: ಪಟ್ಟಣ ವ್ಯಾಪ್ತಿಯಲ್ಲಿ ನೀರು ಒದಗಿಸುವ ಸಲುವಾಗಿ ಪೈಪ್‌ಲೈನ್ ಅಳವಡಿಸಲು ಎಲ್ಲೆಡೆ ಅಗೆದುಹಾಕಲಾಗಿದ್ದು, ರಸ್ತೆಗಳು ಇದೀಗ ಅಕ್ಷರಶಃ ಕೆಸರುಗುಂಡಿಗಳಾಗಿವೆ.
ಪಟ್ಟಣದ ಗಾಂಧಿನಗರ, ನೆಹರೂನಗರ, ಇಂದಿರಾನಗರ ಮುಂತಾದೆಡೆ ರಸ್ತೆಗಳಲ್ಲಿ ಅಗೆದ ಮಣ್ಣನ್ನು ಹಾಗೇ ರಾಶಿ ಹಾಕಿರುವುದರಿಂದ ಮಳೆ ಬಿದ್ದು ಕೆಸರಿನ ರಾಶಿ ಏರ್ಪಟ್ಟಿದೆ.
ಮೊದಲೇ ಪಟ್ಟಣದ ರಸ್ತೆಗಳು ಹಾಳಾಗಿದ್ದು, ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ಸೃಷ್ಟಿಯಾಗಿವೆ. ಮಳೆಗಾಲ ಆರಂಭವಾಗಿರುವುದರಿಂದ ರಸ್ತೆ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಎಲ್ಲೆಂದರಲ್ಲಿ ವಾಹನ ಸ್ಕಿಡ್ ಆಗುವುದರಿಂದ ದ್ವಿಚಕ್ರವಾಹನ ಸವಾರರ ಪರದಾಟ ಹೇಳತೀರದು. ಇದು ಮಳೆಗಾಲದ ಆರಂಭವಷ್ಟೇ. ಇನ್ನು ನಾಲ್ಕು ತಿಂಗಳು ಎಡಬಿಡದೇ ಮಳೆ ಸುರಿಯುವದರಿಂದ, ರಸ್ತೆ ಸಂಚಾರ ಮತ್ತಷ್ಟು ಪ್ರಯಾಸವಾಗಿರಲಿದೆ. ಪ.ಪಂ. ಈ ಬಗ್ಗೆ ಕ್ರಮವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.