ಮುಂಡಗೋಡ: ಕಂಪ್ಯೂಟರ್ ಹಾಗೂ ಹೊಲಿಗೆ ತರಬೇತಿ ಪ್ರಾರಂಭ
Update: 2016-07-22 15:50 IST
ಮುಂಡಗೋಡ, ಜು.22: ಪಟ್ಟಣದ ಲೊಯೊಲಾ ವಿಕಾಸ ಕೇಂದ್ರದಲ್ಲಿ ಕಂಪ್ಯೂಟರ್ ಹಾಗೂ ಹೊಲಿಗೆ ತರಬೇತಿ ಕಾರ್ಯಕ್ರಮ ಆರಂಭಗೊಂಡಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ತಾ.ಪಂ ಅಧ್ಯಕ್ಷೆ ದಾಕ್ಷಾಯಣಿ ಸುರಗಿಮಠ, ಲೊಯೊಲ ವಿಕಾಸ ಕೇಂದ್ರವು ಮುಂಡಗೋಡ ತಾಲೂಕಿನಲ್ಲಿ ಜನರ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದೆ. ಹಲವಾರು ಜನರು ಈ ಕೇಂದ್ರದಿಂದ ಪ್ರಯೋಜನ ಪಡೆದುಕೊಂಡು ಸ್ವಉದ್ಯೋಗಿಗಳಾಗಿ ಜೀವನ ನಡೆಸುತ್ತಿದ್ದಾರೆ ಎಂದು ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಫ್ರಾನ್ಸಿಸ್ ಮೆನೇಜಸ್, ಮುಖ್ಯಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯ ಜಯಮ್ಮ ಕೃಷ್ಣಾ ಹಿರೇಹಳ್ಳಿ, ಶಿಬಾ ರಾಥೊಡ, ಶಾಮಲಾ ಆರ್.ನಾಯಕ, ಉಪನ್ಯಾಸಕರಾಗಿ ಎಂ.ಯು. ಸುಣಗಾರ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕುಮಾರಿ ಪೂಜಾ ಡಿ.ಬಿ. ನಿರೂಪಿಸಿದರು. ಭವಾನಿ ಸ್ವಾಗತಿಸಿದರು. ಉಮಾ ವಂದಿಸಿದರು.