ಆಂಧ್ರದ ಸಂಕೇತದ ಬಳಿ ಲಾರಿ - ಟವೇರಾ ಪರಸ್ಪರ ಢಿಕ್ಕಿ ; 5 ಸಾವು
Update: 2016-07-23 11:14 IST
ಅನಂತಪುರ, ಜು.23: ಅನಂತಪುರ ಜಿಲ್ಲೆಯ ಮುದಿಗುಪ್ಪದ ಸಂಕೇತಪಲ್ಲಿ ಬಳಿ ಶನಿವಾರ ಬೆಳಿಗ್ಗೆ ಲಾರಿ ಮತ್ತು ಟವೇರಾ ಪರಸ್ಪರ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಒಂದು ಮಗು ಸೇರಿದಂತೆ ಐವರು ಮೃತಪಟ್ಟಿದ್ದಾರೆ.6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ
ಮೃತಪಟ್ಟವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದವರು ಎಂದು ಮೂಲಗಳು ತಿಳಿಸಿವೆ.ಗಾಯಗೊಂಡವರನ್ನು ಅನಂತಪುರ ಮತ್ತು ಕರ್ನೂಲು ಜಿಲ್ಲಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಇವರೆಲ್ಲ ಟವೇರಾ ವಾಹನದಲ್ಲಿ ನೆಲಮಂಗಲದಿಂದ ತಿರುಪತಿಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ