×
Ad

ಚಿಕ್ಕಮಗಳೂರಿನಲ್ಲಿ ದಲಿತ ಕುಟುಂಬದ ಮೇಲೆ ಬಜರಂಗದಳದ ಬರ್ಬರ ದಾಳಿ : ವರದಿ

Update: 2016-07-23 20:07 IST

ಚಿಕ್ಕಮಗಳೂರು, ಜು 23 : ಜಿಲ್ಲೆಯ ಕೊಪ್ಪದಲ್ಲಿ ಕಳೆದ ರವಿವಾರ ಬಜರಂಗದಳದ ಸದಸ್ಯರು ದಲಿತ ಕುಟುಂಬವೊಂದರ ಮೇಲೆ ಪೈಶಾಚಿಕ ದಾಳಿ ನಡೆಸಿದ್ದಾರೆಂದು ಹಕ್ಕು ಗುಂಪುಗಳು ಆರೋಪಿಸಿದ ಬಗ್ಗೆ ವರದಿಯಾಗಿದೆ

ಮನೆಯೊಳಗೆ ಗೋ ಮಾಂಸವಿರಿಸಿದ್ದಾರೆಂದು ಆರೋಪಿಸಿ ಅವರು ದಾಳಿ ನಡೆಸಿದ್ದಾರೆಂದು ಅವು ಹೇಳಿವೆ.

ಸುಮಾರು 30-40 ಮಂದಿ ಬಜರಂಗದಳದ ಸದಸ್ಯರು ಮನೆಯೊಳಗೆ ಗೋಮಾಂಸ ವಿರಿಸಿದ್ದಾರೆಂದು ಆರೋಪಿಸಿ, ಬಲರಾಜ್ ಹಾಗೂ ಅವರ ಕುಟುಂಬದ ನಾಲ್ವರ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಹೇಳಿದ್ದಾರೆ.

ಅವರನನ್ನು ನಿರ್ದಯವಾಗಿ ಥಳಿಸಲಾಗಿದೆ. 53 ರ ಹರೆಯದ ಬಲರಾಜ್‌ರ ಕೈ ಮುರಿದಿದೆ. ಕುಟುಂಬ ಸದಸ್ಯರಿಗೆ ಲಘು ಆಂತರಿಕ ಗಾಯಗಳಾಗಿವೆ. ಎಲ್ಲರೂ ಈಗ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ಅವರು ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಕನಿಷ್ಠ 30-40 ದಾಳಿಕೋರರ ವಿರುದ್ಧ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗ (ದೌರ್ಜನ್ಯ ತಡೆ) ಕಾಯ್ದೆ-2015 ರನ್ವಯ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಜರುಗಿಸಲೇ ಬೇಕೆಂದು ದಲಿತ ಹಕ್ಕು ಗುಂಪುಗಳು ಆಗ್ರಹಿಸಿದ್ದವು.

ಆದರೆ, ಇದು ಸ್ಥಳೀಯ ಬಿಜೆಪಿ ಶಾಸಕ ಜೀವರಾಜ್‌ರನ್ನು ಕೆರಳಿಸಿದೆ. ಅವರು ಹಾಗೂ ಬಜರಂಗದಳ ಈ ವಿಷಯದಲ್ಲಿ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಯೋಜನೆ ರೂಪಿಸುತ್ತಿದ್ದಾರೆ. ಇಲ್ಲಿನ ಜಯಪುರದಲ್ಲಿ ಅದು ಆರಂಭವಾಗಲಿದೆಯೆಂದು ಅಶೋಕ್ ಹೇಳಿದ್ದಾರೆ. ದಲಿತ ಹಕ್ಕು ಗುಂಪುಗಳು ಹಾಗೂ ಸಮಾನ ಮನಸ್ಸು ಕಾರ್ಯಕರ್ತರು ದಾಳಿಯ ವಿರುದ್ಧ ಚಳವಳಿಯ ಭಾಗವಾಗಿ ಸೋಮವಾರ ‘ಚಲೋ ಜಯಪುರ’ ನಡೆಸುವ ಯೋಜನೆ ಹಾಕಿ ಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News