×
Ad

ಕೆಎಸ್‌ ಆರ‍್ ಟಿಸಿ ಬಸ್ ಬಂತು ಬಸ್...!

Update: 2016-07-26 17:23 IST

ಬೆಂಗಳೂರು, ಜು.26: ಕೆಎಸ್ ಆರ‍್ ಟಿಸಿ ಬಸ್‌ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಕೊನೆಗೊಳ್ಳದಿದ್ದರೂ, ಪೊಲೀಸ್ ಬೆಂಗಾವಲಿನಲ್ಲಿ ರಾಜ್ಯದ ಹಲವಡೆ  ಕೆಎಸ್ ಆರ‍್ ಟಿಸಿ ಬಸ್‌ ಸೇವೆ ಇಂದು ಸಂಜೆ ಆರಂಭಗೊಂಡಿದೆ. 
ಮೆಜಿಸ್ಟಿಕ್‌ನಲ್ಲಿ ಬಸ್ ಗಳು ಹೊರ ಹೋಗದಂತೆ ಮುಷ್ಕರ ನಿರತರರು ಅಡ್ಡಿಪಡಿಸಿದ್ದಾರೆ.  
ನೌಕರರ ಬೇಡಿಕೆ ಈಡೆರದಿದ್ದರೂ ಪೊಲೀಸ್‌ ಭದ್ರತೆಯಲ್ಲಿ  ಬಸ್‌ಗಳು ರಸ್ತೆಗಿಳಿದಿದೆ. 
ಹುಬ್ಬಳ್ಳಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್‌ಗೆ  ಮುಂದೆ ಹೋಗದಂತೆ ರಸ್ತೆಯಲ್ಲಿ ಮಲಗಿ ನೌಕರರು ಅಡ್ಡಿಪಡಿಸಿದ ಘಟನೆ ವರದಿಯಾಗಿದೆ.  ಬಸ್‌  ಸಂಚಾರಕ್ಕೆ ಅಡ್ಡಿಪಡಿಸಿದವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೆಲವು ಕಡೆ ಮತ್ತೆ ದುಷ್ಕರ್ಮಿಗಳಿಂದ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ತಿಳಿದು ಬಂದಿದೆ.
ನೌಕರರಿಗೆ ವೇತನವನ್ನು  ಶೇ.10ಕ್ಕಿಂತ ಹೆಚ್ಚು ಏರಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News