×
Ad

ಮಹಾದಾಯಿ ತೀರ್ಪಿನ ವಿರುದ್ಧ ರೈತ ಸಂಘದಿಂದ ಪ್ರತಿಭಟನೆ

Update: 2016-07-28 21:50 IST

ಚಿಕ್ಕಮಗಳೂರು, ಜು.28: ಉತ್ತರ ಕರ್ನಾಟಕದ ಕುಡಿಯುವ ನೀರಿನ ಬವಣೆ ನೀಗಿಸುವ ಮಹತ್ತರ ಯೋಜನೆ ಕಳಸಾ-ಬಂಡೂರಿ ನಾಲೆಗೆ ಮಹಾದಾಯಿ ನದಿಯಿಂದ ನೀರು ಹರಿಸಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಜನರಿಗೆ ನೀರೊದಗಿಸುವ ಯೋಜನೆಗಾಗಿ ಕರ್ನಾಟಕವು ಮಹಾದಾಯಿ ನ್ಯಾಯಾಧಿಕರಣಕ್ಕೆ ಕೋರಿದ ಮಧ್ಯಾಂತರ ಅರ್ಜಿಯನ್ನು ನ್ಯಾಯಲಯವು ತಿರಸ್ಕರಿಸಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ ಸಂಘ ಆಝಾದ್ ಪಾರ್ಕ್ ಬಳಿ ಕೊಡ ಪ್ರತಿಕೃತಿ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಇದು ಕರ್ನಾಟಕಕ್ಕೆ ಮಾಡಿರುವ ಮಲತಾಯಿ ಧೋರಣೆಯಾಗಿದೆ. ಕೇವಲ 7.56 ಟಿಎಂಸಿ ನೀರಿನ ಬೇಡಿಕೆಯನ್ನು ಪರಿಗಣಿಸದ ಉತ್ತರ ಕರ್ನಾಟಕ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಧ್ಯ ಪ್ರವೇಶಿಸಿ ನ್ಯಾಯಾಲಯಕ್ಕೆ ಸೂಕ್ತವಾದ ವರದಿ ಸಲ್ಲಿಸಿದ್ದರೆ ನೀರು ಸಿಗುತ್ತಿತ್ತು. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ಲಕ್ಷತನ ಎದ್ದು ತೋರುತ್ತಿದೆ. ಇದನ್ನು ಕರ್ನಾಟಕ ರಾಜ್ಯ ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ.ಆದ್ದರಿಂದ ಮುಂದಿನ ಅಂತಿಮ ತೀರ್ಪಿನ ವೇಳೆಯೊಳಗಾದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಉತ್ತರ ಕರ್ನಾಟಕದ ಕುಡಿಯುವ ನೀರಿನ ಅಗತ್ಯತೆಯ ಬಗ್ಗೆ ಸೂಕ್ತ ವರದಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿ ಕಳಸಾ-ಬಂಡೂರಿ ಯೋಜನೆಯ ಜಾರಿಯಾಗಿ ನೀರು ಒದಗಿಸುವಂತೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು. ಮುಂದೆ ಆಗಬಹುದಾಗ ಅನಾಹುತಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರವೆೇ ನೇರಹೊಣೆಯಾಗಿರುತ್ತದೆ ಎಂದು ಜಿಲ್ಲಾಧ್ಯಕ್ಷ ಎಂ.ಸಿ.ಬಸವರಾಜ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಎನ್.ಸಿ.ಉದ್ದೇಗೌಡ, ಕೆ.ಕೆ.ಕೃಷ್ಣೇಗೌಡ, ಟಿ.ಎ. ಮಂಜುನಾಥ್, ಕೆ.ಪಿ.ಚಂದ್ರೇಗೌಡ ಕೆ.ಎಚ್.ಚಂದ್ರೇಗೌಡ ಜಿಲ್ಲಾ ಉಪಾಧ್ಯಕ್ಷರು, ಎಂ.ಬಿ. ಚಂದ್ರೆಶೇಖರ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News