ಮಹಾದಾಯಿ ನ್ಯಾಯಧೀಕರಣದಿಂದ ಕರ್ನಾಟಕಕ್ಕೆ ಅನ್ಯಾಯ; ಶಾಸಕ ಅಶೋಕ್ ಪಟ್ಟಣ್ ರಾಜೀನಾಮೆ
Update: 2016-07-29 12:02 IST
ಬೆಂಗಳೂರು, ಜು.29: ಮಹಾದಾಯಿ ನ್ಯಾಯಧೀಕರಣದಿಂದ ಕರ್ನಾಟಕ್ಕೆ ಆಗಿರುವ ಅನ್ಯಾಯವನ್ನು ವಿರೋಧಿಸಿ ಬೆಳಗಾವಿ ಜಿಲ್ಲೆ ರಾಮದುರ್ಗದ ಕಾಂಗ್ರೆಸ್ ಶಾಸಕ ಹಾಗೂ ಸರಕಾದ ಮುಖ್ಯ ಸಚೇತಕರಾದ ಅಶೋಕ್ ಮಹದೇವಪ್ಪ ಪಟ್ಟಣ್ ಶುಕ್ರವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇಂದು ಮಧ್ಯಾಹ್ನ ಅವರು ತಮ್ಮ ಸ್ಥಾನಕ್ಕೆ ತಾಲೂಕು ತಹಶೀಲ್ದಾರ್ ಮೂಲಕ ವಿಧಾನಸಭೆಯ ಸ್ಪೀಕರ‍್ ಕೋಳಿವಾಡ್‌ಗೆ ರಾಜೀನಾಮೆ ಸಲ್ಲಿಸಿದರು.
ಪ್ರತಿಭಟನಾಕಾರರು ಪಟ್ಟಣ್ ಮನೆಗೆ ಮುತ್ತಿಗೆ ಹಾಕಲು ಸಿದ್ಧತೆ ನಡೆಸಿರುವಗಾಲೇ ಅವರು ರಾಜೀನಾಮೆ ಪತ್ರ ಬರೆದು ಹೋರಾಟಗಾರರಿಗೆ ಬೆಂಬಲ ಸೂಚಿಸಿದ್ದರು.ಇವರೊಂದಿಗೆ ಕೆಲವು ಮಂದಿ ಜಿ.ಪಂ., ತಾ.ಪಂ ಸದಸ್ಯರು ರಾಜೀನಾಮೆ ನೀಡಿದ್ದಾರೆ.