ಕಡಬ: ವಿದ್ಯುತ್ ಶಾಕ್‌ಗೆ ಯುವಕ ಬಲಿ
Update: 2016-07-29 21:03 IST
ಕಡಬ, ಜು.29. ಇಲ್ಲಿನ ಕೋಡಿಂಬಾಳ ಗ್ರಾಮದ ಪಟ್ನ ನಿವಾಸಿ ದಿ ಮೇದಪ್ಪ ಗೌಡ ಎಂಬವರ ಪುತ್ರ ಬಾಸ್ಕರ(23) ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಶುಕ್ರವಾರ ಅಪರಾಹ್ನ ನಡೆದಿದೆ.
ತೋಟದಲ್ಲಿ ಅಲ್ಯೂಮಿನಿಯಂ ಏಣಿಯಲ್ಲಿ ನಿಂತುಕೊಂಡು ಸೊಪ್ಪು ಕಡಿಯುತ್ತಿದ್ದಾಗ ಏಣಿ ಜಾರಿ ಪಕ್ಕದಲ್ಲಿದ್ದ ವಿದ್ಯುತ್ ತಂತಿ ಮೇಲೆ ಬಿದ್ದಿದ್ದು, ಕೆಳಕ್ಕೆ ಬಿದ್ದ ಭಾಸ್ಕರವರು ಅಸ್ವಸ್ಥರಾಗಿ ಆಸ್ಪತ್ರೆಗೆ ಸಾಗಿಸುವ ಹಾದಿಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.