×
Ad

ಧಾರವಾಡದ ಯಮನೂರು, ಗೌಡರ ಓಣಿಯಲ್ಲಿ ಪೊಲೀಸ್‌ ದೌರ್ಜನ್ಯ

Update: 2016-07-30 11:41 IST

ಧಾರವಾಡ, ಜು.30: ಇಲ್ಲಿನ ಯಮನೂರಿನಲ್ಲಿ ಮಹಾದಾಯಿ ನ್ಯಾಯಾಧೀಕರಣದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ವಿರೋಧಿಸಿ ಬೀದಿಗಿಳಿದವರ ಮೇಲೆ ಪೊಲೀಸರು ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ 
ಆರ್‌ಎಎಫ್ ಮತ್ತು ಪೊಲೀಸರು ದೌರ್ಜನ್ಯ ನಡೆಸಿ ಅಮಾನವೀಯವಾಗಿ ನಡೆಸಿದ್ದಾರೆಂದು ದೂರಲಾಗಿದೆ. 
ಜು..28ರಂದು ಆರ್‌ಎಎಫ್ ಮತ್ತು ಪೊಲೀಸರು ಜನರನ್ನು ಅಟ್ಟಿಸಿಕೊಂಡು ಹೊಡೆಯುತ್ತಿರುವ ದೃಶ್ಯ ಟಿವಿ ಮಾಧ್ಯಮಗಳಲ್ಲಿ ಬಿತ್ತರಗೊಂಡಿದೆ.
ಕಾಲಿಗೆ ಬಿದ್ದರೂ ಬಿಡದೆ ಪೊಲೀಸರು ಲಾಠಿಯಿಂದ ಥಳಿಸಿದ್ದಾರೆ. 
ನವಲಗುಂದದ ಗೌಡರ ಓಣಿಯಲ್ಲಿ ಇಂತದ್ದೆ ಘಟನೆ ವರದಿಯಾಗಿದೆ. ವೃದ್ದರೂ, ಮಹಿಳೆಯರು ಎಂದು ನೋಡದೆ ಪೊಲೀಸರು ಕೈಗೆ ಸಿಕ್ಕಿದವರಿಗೆ  ಥಳಿಸಿದ್ದಾರೆ. ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಬಾರಿಸಿದ್ಧಾರೆ.  ಈ ಘಟನೆಯ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಈ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಅವರು ಮಾಧ್ಯಮಗಳಲ್ಲಿ ಈ ಘಟನೆಯನ್ನು ನೋಡಿದ್ದೇನೆ. ಪೊಲೀಸರು ಸಂಯಮ ವೀರಿ ವರ್ತಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News