×
Ad

ಹಾಸನದಲ್ಲಿ ಬಂದ್ ಸಂಪೂರ್ಣ ಯಶಸ್ವಿ

Update: 2016-07-30 20:36 IST

ಹಾಸನ, ಜು.30: ಮಹದಾಯಿ ಯೋಜನೆಯ ತೀರ್ಪಿನಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಹಾಸನ ಜಿಲ್ಲೆಯಾದ್ಯಂತ ಸಂಪೂರ್ಣ ಯಶಸ್ವಿಯಾಗಿದೆ.
 
ಬಂದ್ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆ ನಿಶಬ್ಧವಾಗಿತ್ತು. ತಾಲೂಕು ಕೇಂದ್ರಗಳಲ್ಲಿ ಬೆಳಗ್ಗಿನಿಂದಲೇ ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಿ ಬಂದ್‌ಗೆ ಬೆಂಬಲ ನೀಡಿದರು. ಹಾಸನ ನಗರದಲ್ಲಿ ಬೀದಿಗಿಳಿದ ವಿವಿಧ ಕನ್ನಡಪರ ಸಂಘಟನೆಗಳು ಬೀದಿಗಳಿದು ಪ್ರತಿಟನೆ ನಡೆಸಿದರು.

ಬ್ಯಾಂಕ್, ಜಿಲ್ಲಾ ಪಂಚಾಯತ್, ಸಿನಿಮಾ ಮಂದಿರ, ಹೋಟೆಲ್ ಎಲ್ಲವನ್ನು ಮುಚ್ಚಲಾಗಿತ್ತು. ಡಾ.ರಾಜಕುಮಾರ್ ಅಭಿಮಾನಿ ಸಂಘ, ಕರ್ನಾಟಕ ಕಾವಲುಪಡೆ, ವೀರಕನ್ನಡಿಗರ ಸೇನೆ, ಕರವೇ ಸಂಘಟನೆ, ರೈತ ಸಂಘ ವರ್ತಕರ ಸಂ, ಆಟೊ ಚಾಲಕರ ಸಂಘ ಸೇರಿದಂತೆ ಇತರೆ ಸಂಘಟನೆಗಳು ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಪ್ರತಿಟನಾ ಮೆರವಣಿಗೆ ನಡೆಸಿದರು. ನಂತರ ಎನ್.ಆರ್. ವೃತ್ತದಲ್ಲಿ ಮಾನವಸರಪಳಿ ನಿರ್ಮಿಸಿದರು. ನಂತರ ಸಂಘಟನೆಯ ಮುಖಂಡರು ಮಹದಾಯಿ ಯೋಜನೆಯ ತೀರ್ಪಿನಲ್ಲಿ ರಾಜ್ಯಕ್ಕೆ ಅನ್ಯಾಯ ಕುರಿತು ಆಕ್ರೋಶವ್ಯಕ್ತಪಡಿಸಿದರು.

ಕೆಲ ಶಾಲಾ-ಕಾಲೇಜ್ ಎಂದಿನಂತೆ ಪ್ರಾರಂಭವಾದರೂ ರಜೆ ನೀಡದಿದ್ದರೂ ಕೂಡ ಬಸ್ ಇಲ್ಲದೆ ವಿದ್ಯಾರ್ಥಿಗಳ ಸಂಖ್ಯೆ ಕೊರತೆಯಿಂದ ನಡೆಯಲಿಲ್ಲ. ಸಾರಿಗೆ ಬಸ್, ಆಟೊ, ಕಾರು, ಟೆಂಪೊ ರಸ್ತೆಗೆ ಇಳಿಯಲಿಲ್ಲ. ಅಲ್ಲಲ್ಲಿ ಕೆಲವೊಂದು ಆಟೊಗಳು ಸಂಚರಿಸಿದವು. ವಕೀಲರು ಕೂಡ ಬಂದ್‌ಗೆ ಬೆಂಬಲ ಸೂಚಿಸಿ ಒಂದು ದಿನದ ಮಟ್ಟಿಗೆ ತಮ್ಮ ಕಾರ್ಯ ಕಲಾಪ ನಿಷೇಧಿಸಿದರು. ಯಾವ ವಕೀಲರು ನ್ಯಾಯಾಲಯಕ್ಕೆ ಕಾಲಿಡಲಿಲ್ಲ.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸತೀಶ್ ಪಾಟೇಲ್, ಡಾ.ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ಮಂಜುನಾಥ್ ಶರ್ಮ, ರೈತ ಸಂಘದ ಅಧ್ಯಕ್ಷ ಸಿದ್ದಪ್ಪ, ತರಕಾರಿ ವರ್ತಕರ ಸಂಘದ ಅಧ್ಯಕ್ಷ ಆನಂದ್, ಆಟೊ ಚಾಲಕರ ಸಂಘದ ಅಧ್ಯಕ್ಷ ಅಬ್ಬಾಸ್, ವೀರ ಕನ್ನಡಿಗ ಟಿಪ್ಪು ಸೇನೆಯ ಸಂಸ್ಥಾಪಕ ಅಕ್ಮಲ್ ಜಾವೀದ್ ಇತರರು ಪಾಲ್ಗೊಂಡಿದ್ದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದ ಆವರಣದಲ್ಲಿ ಮೊದಲು ಕುವೆಂಪು ಪ್ರತಿಮೆ ಎದುರು ಮಹದಾಯಿ ಯೋಜನೆಯ ತೀರ್ಪಿನಲ್ಲಿ ರಾಜ್ಯಕ್ಕೆ ಅನ್ಯಾಯ ಎಸಗಲಾಗಿದೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು. ಘೋಷಣೆ ಕೋಗಿದರು.

ಹಿರಿಯ ಸಾಹಿತಿ ಚಂದ್ರಕಾಂತ ಪಡೆಸೂರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಗೌರವಾಧ್ಯಕ್ಷರಾದ ರವಿನಾಕಲಗೂಡು, ಹಿರಿಯ ಸಾಹಿತಿ ಎನ್.ಎಲ್.ಚನ್ನೇಗೌಡ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನಕುಮಾರ್, ಸಾಹಿತಿ ಕೊಟ್ರೇಶ್ ಎಸ್.ಉಪ್ಪಾರ್ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News