×
Ad

ತರೀಕೆರೆ: ಮ್ಯಾಮ್ಕೋಸ್ ವ್ಯವಸ್ಥಾಪಕರಿಗೆ ಬೀಳ್ಕೊಡಿಗೆ

Update: 2016-07-30 23:04 IST

ತರೀಕೆರೆ, ಜು.30: ಇತ್ತೀಚೆಗೆ ನಿವೃತ್ತಿ ಹೊಂದಿದ ಪಟ್ಟಣದ ಮ್ಯಾಮ್ಕೋಸ್ ವ್ಯವಸ್ಥಾಪಕ ಎಸ್.ಎಸ್.ಕುಮಾರ್‌ರವರಿಗೆ ಸಂಸ್ಥೆಯ ವತಿಯಿಂದ ಮ್ಯಾಮ್ಕೋಸ್ ಕಚೇರಿಯಲ್ಲಿ ಬೀಳ್ಕೊಡಿಗೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಎಂ.ಎ.ಡಿ.ಬಿ ಮಾಜಿ ಅಧ್ಯಕ್ಷ ಎನ್.ಮಂಜುನಾಥ್ ಅವರು ಮಾತನಾಡಿ, ಅಧಿಕಾರಿಗಳಿಗೆ ವೃತ್ತಿಯಿಂದ ನಿವೃತ್ತಿ ಇದೆ. ಹೊರತು ಜೀವನೋತ್ಸಾಹದಿಂದಲ್ಲ. ನಿವೃತ್ತಿಯ ಬದುಕು ಸಮಾಜ ಸೇವೆಗೆ ಮೀಸಲಾಗಿರಲಿ. ಪಟ್ಟಣದಲ್ಲಿ ಸಂಸ್ಥೆ ಆರಂಭವಾದಾಗಿನಿಂದ ವ್ಯವಸ್ಥಾಪಕರು ಜವಾಬ್ದಾರಿಯಿಂದ ದುಡಿದಿದ್ದಾರೆ. ಸಂಸ್ಥೆ ಇವರ ಸೇವೆಯನ್ನು ಸ್ಮರಿಸಲಿ ದೆ ಎಂದರು.

ಬೀಳ್ಕೊಡಿಗೆ ಸ್ವೀಕರಿಸಿ ಮಾತನಾಡಿದ ಎಸ್.ಎಸ್.ಕುಮಾರ್, ಅಧಿಕಾರಿ ಸಂಸ್ಥೆಯ ಎಲ್ಲರ ಸಲಹೆಯಂತೆ ಹಾಗೂ ಆದೇಶದಂತೆ ಕಾರ್ಯನಿರ್ವಹಿಸಿರುತ್ತೇನೆ ಎಂದ ಅವರು ಸಹಕರಿಸಿದ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮ್ಯಾಮ್ಕೋಸ್ ನಿರ್ದೇಶಕ ಆರ್.ದೇವಾನಂದ್, ಜಿಪಂ ಸದಸ್ಯ ಕೆ.ಎಚ್.ಮಹೇಂದ್ರ, ಅಡಿಕೆ ಬೆಳೆಗಾರರಾದ ಟಿ.ಎಸ್.ಮಂಜುನಾಥ್, ನಂದನ್, ರೂಪಾನಾಯ್ಕ, ಸಿಬ್ಬಂದಿ ಸುರೇಶ್, ನಾಗರಾಜು, ಮಾನಸ ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News