ನಾವು ಭಾರತೀಯರು, ಪರದೇಶಿಗಳಲ್ಲ: ಅಸ್ಸಾಂ ಮೂಲದ ಕಾರ್ಮಿಕರ ಅಳಲು

Update: 2016-07-30 18:28 GMT

ಕಲೇಶಪುರ,ಜು.30: ನಾವು ಭಾರತೀಯರು, ಇದಕ್ಕೆ ಬೇಕಾದ ಎಲ್ಲಾ ದಾಖಲಾತಿಗಳೂ ನಮ್ಮ ಬಳಿ ಇವೆ. ಆದರೂ ನಮ್ಮನ್ನು ಪರದೇಶಿಗಳೆಂಬ ಅನುಮಾನದಿಂದ ನೋಡುತ್ತಿದ್ದಾರೆ. ಕಿರುಕುಳ ನೀಡುತ್ತಿದ್ದಾರೆ. ಬೇರೆ ರಾಜ್ಯದವರು ಕರ್ನಾಟಕಕ್ಕೆ ಬಂದು ದುಡಿದು ತಿನ್ನುವುದು, ವಾಸ ಮಾಡುವುದು ತಪ್ಪಾ? 

ಹೀಗೆ ತಮ್ಮ ಮನದಾಳದ ನೋವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡವರು ಇತ್ತೀಚೆಗೆ ತಾಲೂಕಿನ ಕುಂಬಾರಡಿ ಗ್ರಾಮದಲ್ಲಿ ಸಿಡಿಲು ಬಡಿತದಿಂದ ಗಾಯಗೊಂಡು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ಅಸ್ಸಾಂ ರಾಜ್ಯದ ಕಾರ್ಮಿಕರು ಕೆಲವು ಮಾಧ್ಯಮಗಳು ಬಾಂಗ್ಲಾ ಪ್ರದೇಶದವರೆಂದು ಗುಮಾನಿ ವ್ಯಕ್ತಪಡಿಸಿ ಸುದ್ದಿ ಮಾಡಿರುವ ಹಿನ್ನೆಲೆಯಲ್ಲಿ ತಮ್ಮ ಅಳಲನ್ನು ಹೇಳಿಕೊಂಡ ಕಾರ್ಮಿಕರು ನಾವು ಭಾರತೀಯರು ಬಾಂಗ್ಲಾದೇಶದವರಲ್ಲ. ಈ ಸಂಬಂಧ ನಮ್ಮ ಬಳಿ ಎಲ್ಲಾ ದಾಖಲೆಗಳಿವೆ ಎಂದು ದಾಖಲೆ ಸಮೇತ ವಿವರಿಸಿದರು.
   ವಾರ್ತಾಭಾರತಿಯೊಂದಿಗೆ ಮಾತ ನಾಡಿದ ಗಾಯಾಳು ಅಮೀರ್‌ತಾಲೂಕಿನ ಕುಂಬಾರಡಿ ಗ್ರಾಮದ ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ 2 ವರ್ಷಗಳಿಂದ ಸಕಲೇಶ್‌ಪುರದಲ್ಲಿ ವಾಸವಿದ್ದಾರೆ. ಕಳೆದ ಗುರುವಾರ ಸಂಜೆ ಸುರಿದ ಧಾರಾಕಾರ ಮಳೆ ಸಂದರ್ಭ ಅಮೀರ್ ಸೇರಿದಂತೆ ಇವರ ಪತ್ನಿ ಮಸೂಮ್, ಸಂಬಂಧಿಗಳಾದ ನೂನಾಸರ್ ಮತ್ತು ಸದ್ದಾಂ ಹುಸೇನ್‌ರಿಗೆ ಸಿಡಿಲು ಬಡಿದು ಗಾಯಗೊಂಡಿದ್ದರು. ನೂನಾಸರ್ ಮತ್ತು ಸದ್ದಾಂ ಹುಸೇನ್ ಬಿ.ಎ ಪದವೀಧರರಾಗಿದ್ದು ಕೆಲಸಕ್ಕಾಗಿ ಸಕಲೇಶಪುರಕ್ಕೆ ವಲಸೆ ಬಂದು ಕೂಲಿ ಮಾಡುತ್ತಿದ್ದಾರೆ. ಇವರೆಲ್ಲರ ಬಳಿ ಅಸ್ಸಾಂ ಸರಕಾರದ ಮತದಾನ ಚೀಟಿ ಸಮೇತ ಇತರೆ ದಾಖಲೆಗಳನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News