ಆಹಾರ ಪೋಲು ಮಾಡುವ ಮುನ್ನ ಹೈಟಿಯ ಜನರ ಆಹಾರವನ್ನೊಮ್ಮೆ ನೋಡಿ

Update: 2016-07-31 15:53 GMT

ವಿಶ್ವದ ಏಳು ಬಿಲಿಯ ಜನಸಂಖ್ಯೆಗೆ ಸಾಕಷ್ಟು ಆಹಾರವನ್ನು ಜಾಗತಿಕವಾಗಿ ತಯಾರಿಸಲಾಗುತ್ತದೆ. ಹಾಗಿದ್ದರೂ ಜಗತ್ತಿನಲ್ಲಿ ಒಂಭತ್ತರಲ್ಲಿ ಒಬ್ಬ ವ್ಯಕ್ತಿ ಹಸಿವೆಯಿಂದ ರಾತ್ರಿ ಮಲಗುತ್ತಾನೆ. ಪಶ್ಚಿಮದಲ್ಲಿ ಅತೀ ಬಡ ರಾಷ್ಟ್ರವಾದ ಹೈಟಿಯ ಬಡವರು ಉಳಿವಿಗಾಗಿ ತಯಾರಿಸುವ ಆಹಾರವನ್ನೊಮ್ಮೆ ಗಮನಿಸಿ. ಬಡ ಜನರು ತಮ್ಮ ಕೈಗೆ ಏನು ಸಿಗುತ್ತದೋ ಅದನ್ನೇ ತಿನ್ನುತ್ತಿದ್ದಾರೆ. ಹೈಟಿಯಲ್ಲಿ ಆಹಾರದ ಸಮಸ್ಯೆ ತೀವ್ರವಾಗಿದ್ದು, ಜನರು ಉಳಿವಿಗಾಗಿ ಮಣ್ಣಿನ ಕೇಕ್ ತಯಾರಿಸಿ ತಿನ್ನುತ್ತಿದ್ದಾರೆ.
ಮಣ್ಣಿನ ಕೇಕ್ ತಿನ್ನುವುದು ಅವರಿಗೆ ಎಷ್ಟು ಅಭ್ಯಾಸವಾಗಿದೆ ಎಂದರೆ ಅಲ್ಲಿ ಅದು ಸಾಮಾನ್ಯ ಅಭ್ಯಾಸವಾಗಿದೆ. ಮಣ್ಣಿನ ಕೇಕ್ ತಯಾರಿಸಿ ಅದನ್ನು ಮಾರಿ ತಿನ್ನುತ್ತಾರೆ. ಸೈಟ್ ಸೊಲೈಲ್ ಕೊಳೆಗೇರಿಯಲ್ಲಿ ಇದು ಅತೀ ಜನಪ್ರಿಯ ಆಹಾರ. ಬಡವರ ಈ ಆಹಾರ ನೋಡಿದ ಮೇಲಾದರೂ ನಾವು ಪ್ರತಿನಿತ್ಯ ಪೋಲು ಮಾಡುವ ಆಹಾರದ ಬಗ್ಗೆ ಗೌರವಿಸಬೇಕು.
ಇಂದು ಸುಮಾರು 700 ಮಿಲಿಯ ಅಪೌಷ್ಠಿಕ ಮಂದಿ ಜಾಗತಿಕವಾಗಿ ಇದ್ದಾರೆ. ದೇಶಗಳ ಹಸಿವೆಯ ಪ್ರಮಾಣ ಅಂದಾಜಿಸುವ ಜಾಗತಿಕ ಹಸಿವೆ ಸೂಚ್ಯಂಕದ ಪ್ರಕಾರ ಬುರುಂಡಿಯಲ್ಲಿ ಹಸಿವೆಯ ಸ್ಥಿತಿ ಅಪಾಯಕಾರಿಯಾಗಿ ಹೆಚ್ಚಾಗಿದೆ. 2016 ಫೆಬ್ರವರಿಯಲ್ಲಿ ಫ್ರಾನ್ಸ್ ಸೂಪರ್ ಮಾರ್ಕೆಟ್‌ಗಳು ಉತ್ತಮವಾಗಿಯೇ ಇರುವ ಮಾರದೆ ಉಳಿದ ಆಹಾರವನ್ನು ನಷ್ಟ ಮಾಡುವುದು ಮತ್ತು ಮಾರದೆ ಇರುವುದನ್ನು ತಡೆದ ಮೊದಲ ದೇಶವಾಗಿದೆ. ಈ ಮಾರದೆ ಉಳಿದ ಆಹಾರವನ್ನು ಚಾರಿಟಿ ಸಂಸ್ಥೆಗಳು ಮತ್ತು ಆಹಾರ ಬ್ಯಾಂಕುಗಳಿಗೆ ದಾನ ಮಾಡುವಂತೆ ಸರಕು ಮಳಿಗೆಗಳಿಗೆ ದೇಶ ಆದೇಶಿಸಿದೆ.

Full View


ಕೃಪೆ: indiatoday.intoday.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News