×
Ad

ಊಟ ಬಿಟ್ಟರೂ ಪಾಠ ಬಿಡಬೇಡಿ, ಜ್ಞಾನ ಎಂಬುದು ನಿರಂತರ: ಕೆ. ಮಂಜುನಾಥ್

Update: 2016-08-01 18:07 IST

ಹಾಸನ,ಆ.1: ಊಟ ಬಿಟ್ಟರೂ ಪಾಠ ಬಿಡಬಾರದು. ಜ್ಞಾನ ಎಂಬುದು ನಿರಂತವಾಗಿದೆ ಎಂದು ಕಟ್ಟಾಯ ಶೈವ ಆಗಮದ ಪಂಡಿತರು ಕೆ. ಮಂಜುನಾಥ್ ತಿಳಿಸಿದ್ದಾರೆ.
      ನಗರದ ಶ್ರೀ ಚನ್ನಕೇಶವ ದೇವಾಲಯದ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕ್ ಧಾರ್ಮಿಕ ದತ್ತಿ ಅರ್ಚಕರ ಕ್ಷೇಮಾಭಿವೃದ್ಧಿ ವತಿಯಿಂದ ಏರ್ಪಡಿಸಲಾಗಿದ್ದ ಮುಜರಾಯಿ ದೇವಾಲಯ ಅರ್ಚಕರ ಆಗಮ ತರಬೇತಿ ಶಿಬಿರದಲ್ಲಿ ಉದ್ದೇಶಿಸಿ ಮಾತನಾಡುತ್ತಾ, ಪ್ರತಿಯೊಬ್ಬರಿಗೂ ಜ್ಞಾನ ಎಂಬುದು ಅಗತ್ಯವಾಗಿ ಬೇಕು. ಅದಕ್ಕಾಗಿ ಅವಶ್ಯಕವಾದ ಪುಸ್ತಕವನ್ನು ಓದಬೇಕು ಎಂದು ಹೇಳಿದರು. ವಿಷಯವನ್ನು ಕಲಿತುಕೊಳ್ಳುವ ಮೂಲಕ ಹೆಚ್ಚಿನ ಪರಿಜ್ಞಾನ ಪಡೆಯಬಹುದು ಎಂದರು. ವಿಧ್ಯೆಯನ್ನು ಸಂಪೂರ್ಣವಾಗಿ ಕಲಿತು ದೇವಸ್ಥಾನದ ನಿಯಮವನ್ನು ಅರಿಯಬೇಕು ಎಂದು ಕಿವಿಮಾತು ಹೇಳಿದರು. ಮನಸ್ಸಿನಲ್ಲಿ ಬಯಸುವ ಚಿಂತೆ ಉತ್ತಮವಾಗಿದ್ದರೇ ಮಾತ್ರ ಒಳ್ಳೆಯ ಅರ್ಚಕರು ಆಗಬಹುದು ಎಂದು ಸಲಹೆ ನೀಡಿದರು. ಎಡವುವ ಮೊದಲೆ ಪರಿಜ್ಞಾನ ಇದ್ದರೇ ಮುಂದಿನ ದಾರಿ ನಿಮ್ಮಂತೆ ಇರುತ್ತದೆ ಎಂದರು. ವೇದಗಳಲ್ಲಿ ಜೋತಿಷ್ಯ ಇದ್ದು, ಗಣಿತ ಮತ್ತು ಚಂದಸ್ ಬರುತ್ತದೆ ಎಂದು ಹೇಳಿದರು.
    ಶಿಬಿರದಲ್ಲಿ ವಿದ್ವಾನ್ ಅಪ್ರಮಯ ಭಟ್ಟಚಾರ್, ವೀರಶೈ ಆಗಮದ ದೇವಶಾಸ್ತ್ರಿ, ಅರ್ಚಕರ ಸಂಘದ ಅಧ್ಯಕ್ಷರಾದ ಪುಟ್ಟಣಯ್ಯ, ತಾಲ್ಲೂಕ್ ಅಧ್ಯಕ್ಷ ಶಿವಮಲ್ಲೇಗೌಡ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News