×
Ad

ಪುತ್ರವಿಯೋಗದ ದು:ಖದ ನಡುವೆಯೂ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿ.ಎಂ.ಸಿದ್ದರಾಮಯ್ಯ

Update: 2016-08-01 18:29 IST

ಬೆಂಗಳೂರು,ಆ.1: ಪುತ್ರ ವಿಯೋಗದ ದು:ಖದಲ್ಲಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ದೇಶಕ್ಕಾಗಿ ಪ್ರಾಣತೆತ್ತ ಕರ್ನಾಟಕದ ಹುತಾತ್ಮ ಯೋಧರ ನಿಧನಕ್ಕೆ ಇಂದು  ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿಯಲ್ಲಿ ಉಗ್ರರು ಅಡಗಿಸಿಟ್ಟಿದ್ದ ಗ್ರೆನೇಡ್ ಸ್ಫೋಟಗೊಂಡ ಪರಿಣಾಮ ಯೋಧರಾದ  ಗೋಕಾಕ್ ತಾಲ್ಲೂಕಿನ ಖನಗಾವಿ ನಿವಾಸಿ ಬಸಪ್ಪ ಪಾಟೀಲ್  ಹಾಗೂ ನವಲಗುಂದ ತಾಲ್ಲೂಕಿನ ಸೈದಾಪುರ ನಿವಾಸಿ ಹಸನ್ ಸಾಬ್ ಮೃತಪಟ್ಟಿದ್ದರು.
ಯೋಧರ  ನಿಧನಕ್ಕೆ ಮುಖ್ಯ ಮಂತ್ರಿ  ಸಿದ್ದರಾಮಯ್ಯ  ಸಂತಾಪ  ಸೂಚಿಸಿದ್ದಾರೆ. " ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ದಾಳಿ ವೇಳೆ ಹುತಾತ್ಮರಾದ ಕರ್ನಾಟಕದ ಯೋಧರಿಗೆ ನಮಸ್ಕರಿಸುತ್ತೇನೆ ಎಂದು ಸಿದ್ದರಾಮಯ್ಯ ಅವರ ಟ್ವೀಟ್  ಮಾಡಿದ್ದಾರೆ.

ಹುತಾತ್ಮ ಯೋಧರ  ಪಾರ್ಥಿವ   ಶರೀರ   ಗೋವಾ ವಿಮಾನ ನಿಲ್ದಾಣಕ್ಕೆ  ಆಗಮಿಸಿದ್ದು, ಬೆಳಗ್ಗೆ 9 ಗಂಟೆಗೆ ಆಗಮಿಸಿದ ಯೋಧರ ಪಾರ್ಥೀವ  ಶರೀರವನ್ನು ಸೇನಾ ವಿಶೇಷ ವಾಹನದಲ್ಲಿ ಅವರವರ ಹುಟ್ಟೂರಿಗೆ ರವಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News