ಪಾಶ್ಚಿಮಾತ್ಯ ಸಂಸ್ಕೃತಿ ಮಾನವರ ನಡುವೆ ಕಂದಕ ನಿರ್ಮಾಣ ಮಾಡುತ್ತಿದೆ: ಎಸಿ ನಾಗರಾಜು ವಿಷಾದ
ಹಾಸನ,ಆ.01: ಸೂರ್ಯ ಉದಯಿಸುವ ದಡದಲ್ಲಿದ್ದರೂ ನಾವುಗಳು ಪಾಶ್ಚಿಮಾತ್ಯ ಸಂಸ್ಕೃತಿಯಡೆಗೆ ವಾಲುತ್ತಿದ್ದೇವೆ. ಈ ಪಾಶ್ಚಿಮಾತ್ಯ ಸಂಸ್ಕೃತಿ ಭಾರತೀಯರ ಮಧ್ಯೆ ಕಂದಕವನ್ನ ಉಂಟುಮಾುತ್ತಿದೆ. ಎಂದು ಹಾಸನದ ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜು ವಿಷಾದ ವ್ಯಕ್ತಪಡಿಸಿದರು.
ನಗರದ ಗಾಂಧಿ ಬಜಾರ್‌ನಲ್ಲಿರುವ ಶ್ರೀ ಚನ್ನಕೇಶವ ದೇವಾಲಯದಲ್ಲಿ ಹಾಸನ ಜಿಲ್ಲಾ ಧಾರ್ಮಿಕ ದತ್ತಿ ಅರ್ಚಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಆಗಮ ತರಬೇತಿ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು. ಇಂದು ಗ್ರಾಮೀಣ ಪ್ರದೇಶದಲ್ಲಿರುವ ಅರ್ಚಕರ ಸ್ಥಿತಿಯನ್ನ ನೋಡಿದರೇ ಕಣ್ಣೀರು ಬರುತ್ತದೆ. ಅವರ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು ಇದು ದೇವಾಲಯಗಳ ಅಭಿವೃದ್ದಿಗೆ ಮಾರಕವಾಗಿದೆ. ದೇವರು ಮತ್ತು ಭಕ್ತರ ನಡುವೆ ಅರ್ಚಕರು ಕೊಂಡಿಯಾಗಿದ್ದಾರೆ. ಇಂತಹ ಅರ್ಚಕರ ಪಾತ್ರ ಸಮಾಜಕ್ಕೆ ಅತ್ಯಮೂಲ್ಯವಾಗಿದ್ದು, ಸರ್ಕಾರ ಈ ನಿಟ್ಟಿನಲ್ಲಿ ದೇವಾಲಯಗಳ ಅಭಿವೃದ್ದಿ ಮಾಡುವ ಮೂಲಕ ಅರ್ಚಕರ ಉಳಿವಿಗೆ ಶ್ರಮಿಸಬೇಕಿದೆ ಎಂದರು. ಅರ್ಚರರ ಕುಟುಂಬದ ಅಭಿವೃದ್ದಿಗೆ ಮಾಸಿಕ ಕನಿಷ್ಠ 5ಸಾವಿರ ರೂ. ವೇತನ ನಿಗಧಿ ಮಾಡಬೇಕು. ಗ್ರಾಮೀಣಾ ಭಾಗದಲ್ಲಿ ಭಾರತೀಯ ಸಂಸ್ಕೃತಿ ಮರೆಯಾಗುತ್ತಿದೆ. ಆದರೇ ಆ ಭಾಗದ ಅರ್ಚಕರು ಮಾತ್ರ ಸಂಸ್ಕೃತಿಯ ಉಳಿವಿಗಾಗಿ ಕುಟುಂಬದ ಸದಸ್ಯರೊಬ್ಬರನ್ನ ಅರ್ಚಕ ವೃತ್ತಿಯಲ್ಲಿ ಮುಂದುವರೆಸುವ ಮೂಲಕ ತಮ್ಮ ಜೀವನ ಸವೆಸುತ್ತಿದಾ್ದರೆಂದು ವಿಷಾಧ ವ್ಯಕ್ತಪಡಿಸಿದರು.
ಅರ್ಚಕರು ಸಮಾಜದ ಆಸ್ತಿ ಇಂದು ವಿಜ್ಞಾನ ತಂತ್ರಜ್ಞಾನ ಎಷ್ಟೆ ಮುಂದುವರೆದರು ಭಾರತೀಯ ಸಂಸ್ಕೃತಿಗೆ ಎಳ್ಳಷ್ಟು ಧಕ್ಕೆಯಾಗುವುದಿಲ್ಲ. ಆದ್ರೆ ಭಾರತೀಯರು ವಿದೇಶಿ ಸಂಸ್ಕೃತಿಯೆಡೆ ಮುಖ ಮಾಡುತ್ತಿದ್ದರೇ, ವಿದೇಶಿಗರು ಭಾರತೀಯ ಸಂಸ್ಕೃತಿಯ ಕಡೆ ವಾಲುತ್ತಿದ್ದಾರೆ. ಅರ್ಚಕ, ಪುರೋಹಿತ ಎಂಬ ಪದಗಳು ಅಸಮಾನ್ಯ ಪದಗಳು. ಆ ಪದದಲ್ಲಿ ಸಂಪ್ರದಾಯದ ಶಕ್ತಿ ತುಂಬಿದೆ. ಶಂಕರಚಾರ್ಯ, ರಾಮಾನುಜಾಚಾರ್ಯ, ಮಧ್ವಚಾರ್ಯ, ಶ್ರೀ ರಾಘವೇಂದ್ರ ಸ್ವಾಮಿಗಳು ಒಳಗೊಂಡತೆ ಮುಂತಾದ ಧಾರ್ಶನಿಕರು ಜನಪ್ರತಿನಿಧಿಗಳಾದೇ ನೆಲದ ಸಂಸ್ಕೃತಿಯ ಉಳಿವಿಗಾಗಿ ಹೋರಾಟ ಮಾಡಿ ಇಂದಿಗೂ ಪೂಜಿಸಲ್ಪಡತ್ತಿದ್ದಾರೆ. ಎಲ್ಲಾ ಅರ್ಚಕರುಗಳನ್ನ ಸಮಾನ ರೀತಿಯಲ್ಲಿ ಕಾಣುವ ಮೂಲಕ ಸರ್ಕಾರ ಸಮಾನ ವೇತನ ನಿಗದಿ ಮಾಡಿ ಅರ್ಚಕರ ಉಳಿವಿಗೆ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅರ್ಚಕರ ಸಂಘದ ರಾಜ್ಯಾಧ್ಯಕ್ಷರಾದ ಜಾನಕೀರಾಮ್ ಮಾತನಾಡಿ ತಸ್ತಿಕ್ ವೇತನವನ್ನ 5 ಸಾವಿರಕ್ಕೆ ಏರಿಕೆ ಮಾಡುವ ಬಗ್ಗೆ ಮುಜಾರಾಯಿ ಆಂುುಕ್ತರಿಗೆ ಪ್ರಸ್ತಾವನೆಯನ್ನ ಸಲ್ಲಿಸಲಾಗುವುದು. ಇದಕ್ಕೆ ತಾವುಗಳೆಲ್ಲಾ ಒಗ್ಗಟ್ಟು ಪ್ರದರ್ಶಿಸಬೇಕು. ಅರ್ಚಕ ಸಂಘ ಡಿಸೆಂಬರ್‌ನಲ್ಲಿ ಬೃಹತ್ ಸಮಾವೇಶ ಮಾಡಲಿದ್ದು, ಅಂದು ಮುಖ್ಯಮಂತ್ರಿಗಳಿಂದ 5ಸಾವಿರ ಮಾಸಿಕ ತಸ್ತಿಕ್ ಘೋಷಣೆ ಮಾಡಿಸುವ ಭರವಸೆ ನೀಡಿದರು.
ನಂತರ ಮಾತನಾಡಿದ ತಹಶೀಲ್ದಾರ್ ಮಂಜುನಾಥ್ ಜಿಲ್ಲೆಯಲ್ಲಿನ ಅರ್ಚಕರ ಕುಂದು ಕೊರತೆಗಳ ಬಗ್ಗೆ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಸರ್ಕಾರ ಶೀಘ್ರದಲ್ಲಿಯೇ ತಮ್ಮ ಸಮಸ್ಯೆಗಳನ್ನ ಆಲಿಸಿ ಸ್ಪಂದಿಸಲಿದೆ ಎಂದರು.
ಇದೇ ಸಂದರ್ಭದಲ್ಲಿ ಮುಜರಾಯಿ ನಿಧಿಯಿಂದ ಅರ್ಚಕರ ಆಶ್ರಯ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ ಕೆ.ಬ್ಯಾಡರಹಳ್ಳಿ, ದೊಡ್ಡಪುರ, ಮತ್ತು ಕಟ್ಟಾಯ ಹೋಬಳಿಯ ಹಳ್ಳಿಯೊಂದರ ಅರ್ಚಕರಿಗೆ ತಲಾ 5ಲಕ್ಷ ರೂಗಳು ಮಂಜೂರಾಗಿದೆ ಎಂದು ತಾಲ್ಲೂಕು ಕಾರ್ಯರ್ಶಿ ಧನಂಜಯಮೂರ್ತಿ ತಿಳಿಸಿದರು.
ಕಳೆದ 15 ದಿನಗಳಿಂದ ಆಗಮ ವಿದ್ಯಾರ್ಥಿಗಳಿಗೆ ಅಪ್ರಮೇಯ ಪ್ರಸಾದ್ ಭಟ್ಟಾಚಾರ್ಯ, ಹರಿಪ್ರಸಾದ್, ದೇವರಾಜಶಾಸ್ತ್ರಿ, ಮಂಜುನಾಥ್, ಯದುನಂದರ್, ಸೇರಿದಂತೆ ಹಲವು ಪಾಂಜರಾ್ರರು ಆಗಮ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅರ್ಚಕ ಸಂಘದ ಅಧ್ಯಕ್ಷ ಪುಟ್ಟಣ್ಣಯ್ಯ, ತಾಲ್ಲೂಕು ಅಧ್ಯಕ್ಷ ಶಿವಮಲ್ಲೇಗೌಡ, ಖಂಜಾಚಿ ಜಗದೀಶ್, ಸಹಕಾರ್ಯದರ್ಶಿ ಗೋವಿಂದಸ್ವಾಮಿ ಉಪಸ್ಥಿತರಿದ್ದರು. ಧನಂಜಯ ಮೂರ್ತಿ ವೇದಿಕೆ ಗಣ್ಯರನ್ನ ಸ್ವಾಗತಿಸಿ, ವಂದಿಸಿದರು.