ಭಟ್ಕಳ: ಜಮಿಲ್ ಅಹ್ಮ ದ್ ಷರೀಫ್‌ಗೆ ಉತ್ತಮ ಶಿಕ್ಷಕ ಪ್ರಶಸ್ತಿ
ಭಟ್ಕಳ,ಆ.1: ಇಲ್ಲಿನ ರಾಬಿತಾ ಸೂಸೈಟಿಯ ವತಿಯಿಂದ ನೀಡಲಾದ 2016-17ನೆ ಸಾಲಿನ ಶೈಕ್ಷಣಿಕ ವರ್ಷದ ಉತ್ತಮ ಶಿಕ್ಷಕ ಪ್ರಶಸ್ತಿಯು ನವಾಯತ್ ಕಾಲನಿ ಅಂಜುಮನ್ ಪ್ರೌಢಶಾಲೆಯ ಶಿಕ್ಷಕ ಹಾಗೂ ಅಲ್‌ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಭಟ್ಕಳ ಶಾಖೆಯ ಪ್ರಧಾನ ಕಾರ್ಯದರ್ಶಿಯಾದ ಜಮಿಲ್ ಅಹ್ಮದ್ ಷರೀಫ್‌ಗೆ ಒಲಿದು ಬಂದಿದೆ. ಭಟ್ಕಳದ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲಾ ಮೈದಾನದಲ್ಲಿ ರವಿವಾರ ರಾಬಿತಾ ಸೊಸೈಟಿ ಆಯೋಜಿಸಿದ್ದ ರಾಬಿತಾ ಶೈಕ್ಷಣಿಕ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ಹಾಗೂ ಪದಕವನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ರಾಬಿತಾ ಸಂಸ್ಥೆಯು ಇಂತಹ ಪ್ರಶಸ್ತಿಯನ್ನು ನೀಡುತ್ತಿರುವುದು ನಿಜಕ್ಕೂ ಶಿಕ್ಷಕ ಸಮುದಾಯಕ್ಕೆ ಸಂತಸದ ವಿಷಯವಾಗಿದೆ. ತಾನು ಈ ಪ್ರಶಸ್ತಿ ಪಡೆಯಲು ಕಾರಣಕರ್ತರಾದ ನನ್ನ ಪ್ರೀತಿಯ ವಿದ್ಯಾರ್ಥಿಗಳಿಗೆ ಹಾಗೂ ನನ ್ನ ಜೊತೆಯಲ್ಲಿದ್ದು ಶೈಕ್ಷಣಿಕ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ನನ್ನ ಎಲ್ಲ ಶಿಕ್ಷಕ ಬಂಧುಗಳಿಗೆ ಪ್ರಶಸ್ತಿ ಅರ್ಪಿಸುತ್ತಿರುವುದಾಗಿ ತಿಳಿಸಿದರು. ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಮುಲ್ಲಾ ಇಕ್ಬಾಲ್ ನದ್ವಿ, ಪ್ರಶಸ್ತಿಯನ್ನು ಪ್ರದಾನಿಸಿದರು. ಈ ಸಂದರ್ಭದಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಗಳ ಮಾಜಿ ಅಧ್ಯಕ್ಷ ಹಾಗೂ ಅನಿವಾಸಿ ಭಾರತೀಯ ಡಾ.ಸೈಯ್ಯದ್ ಖಲಿಲುರ್ರಹ್ಮಾನ್, ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಮಾಂಕಾಳ ವೈದ್ಯ, ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಕಾಝಿಯಾ, ಅಂಜುಮನ್ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ,ಸಿಪಿಐ ಸುರೇಶ್ ನಾಯಕ, ಮೌಲಾನ ಮುಹಮ್ಮದ್‌ಇಲ್ಯಾಸ್ ನದ್ವಿ, ರಾಬಿತಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುದ್ದೀನ್‌ಕೊಚ್ಚಾಪ್ಪೊರುಕ್ನದ್ದೀನ್ ಮತ್ತಿತರರು ಉಪಸ್ಥಿತರಿದ್ದರು.