ಆವರಿಸಿದೆ ಬರಗಾಲದ ಕರಿನೆರಳು
Update: 2016-08-01 22:19 IST
ಶಿವಮೊಗ್ಗ, ಆ. 1: ಮುಂಗಾರು ಮಳೆಯ ನಾಲ್ಕು ತಿಂಗಳ ಅವಧಿಯಲ್ಲಿ, ವಿಶೇಷವಾಗಿ ಮಲೆನಾಡು ಪ್ರದೇಶದಲ್ಲಿ ಜುಲೈ ಮಾಹೆಯಲ್ಲಿಯೇ ಅತೀ ಹೆಚ್ಚು ವರ್ಷಧಾರೆಯಾಗುತ್ತದೆ. ಈ ತಿಂಗಳಲ್ಲಿಯೇ ಕೆರೆಕಟ್ಟೆ-ಜಲಾಶಯಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ. ಆದರೆ, ಕಳೆದ ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ಬಿದ್ದ ಮಳೆಯ ಪ್ರಮಾಣ ಸಂಪೂರ್ಣ ಕಡಿಮೆಯಾಗಿದ್ದು, ಜಿಲ್ಲೆಯ ಏಳೂ ತಾಲೂಕುಗಳಲ್ಲಿ ವಾಡಿಕೆಯ ಮಳೆಯೂ ಆಗಿಲ್ಲ.