×
Ad

ಭಟ್ಕಳ: ಬೊಲೆರೊ ಢಿಕ್ಕಿ; ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತ್ಯು

Update: 2016-08-02 18:26 IST

ಭಟ್ಕಳ, ಆ.2: ಬೈಕ್ ಹಾಗೂ ಬೊಲೆರೊ ಮಧ್ಯೆ ನಡೆದ ರಸ್ತೆ ಅಪಘಾತದಲಿ ್ಲಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ತಾಲೂಕಿನ ಗಡಿಭಾಗದಲ್ಲಿ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಉಡುಪಿ ಜಿಲ್ಲೆಯ ನಾಗೂರು ನಿವಾಸಿ ಅಬ್ದುಲ್ ಹಮೀದ್(50)ಎಂದು ಗುರುತಿಸಲಾಗಿದೆ.

ಹಮೀದ್ ದ್ವಿಚಕ್ರ ವಾಹನದಲ್ಲಿ ಭಟ್ಕಳಕ್ಕೆ ಬರುತ್ತಿದ್ದಾಗ ಎದುರಿನಿಂದ ಬಂದ ಮೀನು ಸಾಗಾಟ ಮಾಡುತ್ತಿದ್ದ ಬೊಲೆರೊ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಮೃತರು ಸಾಹಿಲ್ ಆನ್‌ಲೈನ್‌ನ ಗಂಗೊಳ್ಳಿ ವರದಿಗಾರ ಇಬ್ರಾಹಿಂ ಗಂಗೊಳ್ಳಿಯವರ ಸಮೀಪದ ಸಂಬಂಧಿ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News