ಭಟ್ಕಳ: ಅಂಜುಮನ್ ಎಂಬಿಎ ಕಾಲೇಜಿಗೆ ಶೇ.100 ಫಲಿತಾಂಶ

Update: 2016-08-02 15:58 GMT

ಭಟ್ಕಳ, ಆ.2: ಅಂಜುಮಾನ್ ಹಾಮಿ-ಇ-ಮುಸ್ಲಿಮೀನ್ ಸಂಸ್ಥೆಯ ಅಂಜುಮಾನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್‌ ಕಾಲೇಜಿನ ಅಂತಿಮ ಎಂ.ಬಿ.ಎ. ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ದಾಖಲಿಸಿದ್ದಾರೆ.

ಪರೀಕ್ಷೆಗೆ ಹಾಜರಾದ 28 ವಿದ್ಯಾರ್ಥಿಗಳಲ್ಲಿ 13 ಮಂದಿ ಅತ್ಯುನ್ನತ ಶ್ರೇಣಿ, 15 ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಮೊಹಮ್ಮದ್ ಮೊಹತಿಶಮ್ ಜಾಕ್ಟಿ ಶೇ.77 ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದು, ಹುಸೇನ್ ಶಬ್ಬಿರ್ ರುಕ್ನುದ್ದೀನ್‌ರೂರಲ್ ಮಾರ್ಕೆಟಿಂಗ್‌ನಲ್ಲಿ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ರ್ಯಾಂಕ್, ಮಾರ್ಕೆಟಿಂಗ್ ಮೆನೇಜ್‌ಮೆಂಟ್‌ನಲ್ಲಿ ದ್ವಿತೀಯ ರ್ಯಾಂಕ್, ಮೆಹರ್ ಕಾಶಿಮಜಿ ಸ್ಟ್ರಾಟಿಜಿಕ್ ಬ್ರಾಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ದ್ವಿತೀಯ ರ್ಯಾಂಕ್ ಗಳಿಸಿದ್ದಾರೆ.

ವಿದ್ಯಾರ್ಥಿಗಳಾದ ಮುಹಮ್ಮದ್ ಅಬ್ರಾರ್ ಶೇ.76, ಹುಸೇನ್ ಶಬ್ಬೀರ್ ಶೇ.75, ಆಶಾ ಮೊಗೇರ ಶೇ.75, ಮಹೆರ್ ಕಾಶಿಮಜಿ ಶೇ.74, ಶಾರಿಕ್‌ಅಹಮ್ಮದ್ ಶೇ.73, ಅರೀಫಾ ಅಫ್ರೀನ್ ಶೇ.72, ನಶಿತ್ ಸುಫಿಯಾನ್ ಶೇ.72, ಮುಹಮ್ಮದ್ ನಜೀಫ್ ಶೇ.71, ವಾಲಿದ್ ಶೇ.71, ಸೈಯದ್ ಹುಸೇನ್ ಶೇ.71, ನಾಗೇಶ ಶೇ.70, ವಿನಾಯಕ ಎಸ್. ನಾಯ್ಕ ಶೇ.70 ಅಂಕಗಳನ್ನು ಗಳಿಸುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News