×
Ad

ತರೀಕೆರೆ: ಬೀಳ್ಕೊಡುಗೆ ಸಮಾರಂಭ

Update: 2016-08-02 22:17 IST

 ತರೀಕೆರೆ, ಆ.2: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯಾಗಿದ್ದ ಎಚ್.ಎನ್.ಛಾಯಾಪತಿ ನಿವೃತ್ತಿಯಾದ ಪ್ರಯುಕ್ತ ಅವರಿಗೆ ಸಮಿತಿಯ ಸಭಾಂಗಣದಲ್ಲಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.

 ಈ ಸಂದರ್ಭ ತಹಶೀಲ್ದಾರ್ ಮಹೇಶ್ಚಂದ್ರ ಮಾತನಾಡಿ, ಛಾಯಾಪತಿಯವರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಕಾರ್ಯದರ್ಶಿಯಾಗಿ ಅಧಿಕಾರದಲ್ಲಿದ್ದ ಎರಡೂವರೆ ವರ್ಷದ ಅವಧಿಯಲ್ಲಿ ಆಡಳಿತ ಮಂಡಳಿಯ ವಿಶ್ವಾಸ ಪಡೆದು ಹಲವಾರು ಉತ್ತಮ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದಾರೆ. ತಾಲೂಕಿನ ಉಪ ಮಾರುಕಟ್ಟೆ ಸಮಿತಿಗಳಿಗೂ ಹಲವು ಸೌಲಭ್ಯ ಒದಗಿಸಿದ್ದು, ಹೆಚ್ಚು ಅನುದಾನ ತರುವಲ್ಲಿ ಸಫಲರಾಗಿದ್ದಾರೆ ಎಂದು ಪ್ರಶಂಸಿಸಿದರು.

ಮಾಜಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಛಾಯಾಪತಿಯವರು ಎಲ್ಲರ ಜೊತೆ ವಿಶ್ವಾಸದಿಂದ ಇರುತ್ತಿದ್ದರು. ನಿವೃತ್ತಿಯ ಬದುಕಿನಲ್ಲಿ ಸದಾ ಕ್ರಿಯಾಶೀಲರಾಗಿರುವ ಮೂಲಕ ಹೆಚ್ಚು ಸಾಮಾಜಿಕ ಕಾರ್ಯಗಳಲ್ಲಿ ಅವರು ತೊಡಗಿಸಿಕೊಳ್ಳಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಬಂಡಜ್ಜಿ ಗೋವಿಂದಪ್ಪ, ಸೋಮಶೇಖರ್, ಗಂಗಾಧರಪ್ಪ, ರೇವಣ್ಣ, ಶಂಕರಲಿಂಗಪ್ಪ, ನಿರ್ದೇಶಕ ಬಸವರಾಜು, ನಾಗೇಂದ್ರಪ್ಪ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News