ಅಬಕಾರಿ ಇಇಲಾಖೆಗೆ ಡಿಸಿ ದಿಢೀರ್ ಭೇಟಿ

Update: 2016-08-02 16:49 GMT

 ಶಿವಮೊಗ್ಗ, ಆ. 2: ಶಿವಮೊಗ್ಗ ನಗರದ ಅಬಕಾರಿ ಇಲಾಖೆಗೆ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿಯವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿ ತಬ್ಬಿಬ್ಬಾದ ಘಟನೆ ವರದಿಯಾಗಿದೆ. ಆರೋಪಿಗಳ ಪತ್ತೆಯಲ್ಲಿ ವಿಳಂಬ, ಕಲಬೆರಕೆ ಮದ್ಯ ಮಾರಾಟ, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ, ಕಚೇರಿಯಲ್ಲಿ ಅಸ್ವಚ್ಛತೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಅಬಕಾರಿ ಜಿಲ್ಲಾಧಿಕಾರಿ ವೈ.ಆರ್. ಮೋಹನ್, ನಿರೀಕ್ಷಕ ಹನುಮಂತಪ್ಪ ಅವರನ್ನು ತರಾಟೆಗೆ ತೆಗೆದು ಕೊಂಡ ಅವರು, ಕಾಲಮಿತಿಯಲ್ಲಿ ಎಲ್ಲಾ ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಡಿದರು. ಇಲ್ಲದಿದ್ದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ದಿಢೀರ್ ಭೇಟಿ: ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ಜಿಲ್ಲಾಧಿಕಾರಿಯವರು ನಗರದ ಆರ್‌ಟಿಒ ಕಚೇರಿ ರಸ್ತೆಯಲ್ಲಿರುವ ಅಬಕಾರಿ ಉಪ ಆಯುಕ್ತರ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳು ಹಾಗು ಸಿಬ್ಬಂದಿಗೆ ಆಘಾತ ನೀಡಿದರು. ಜಿಲ್ಲಾಧಿಕಾರಿಯವರು ಆಗಮಿಸುತ್ತಿದ್ದಂತೆ ಕಚೇರಿಯಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಆತಂಕಿತರಾಗುವ ಜೊತೆಗೆ, ಗೊಂದಲಕ್ಕೀಡಾದರು. ಉಪ ಆಯುಕ್ತರ ಕಚೇರಿಯ ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಸಿಬ್ಬಂದಿಯ ಹಾಜರಾತಿ ಪರಿಶೀಲಿಸಿ, ಕರ್ತವ್ಯದಲ್ಲಿದ್ದೂ ಹಾಜರಾತಿ ಹಾಕದ ಸಿಬ್ಬಂದಿ ಹಾಗೂ ಗೈರಾಗಿರುವ ಸಿಬ್ಬಂದಿಯ ವಿವರ ಸಂಗ್ರಹಿಸಿದರು.

ಅಬಕಾರಿ ಜಿಲ್ಲಾಧಿಕಾರಿ ವೈ.ಆರ್. ಮೋಹನ್ ಹಾಗೂ ನಿರೀಕ್ಷಕ ಹನುಮಂತಪ್ಪ ರವರಿಂದ ಇಲಾಖೆಯ ಪ್ರಗತಿ   ರಿಶೀಲನಾ ವರದಿ ಸಂಗ್ರಹಿಸಿದ ಅವರು, 519 ಆರೋಪಿಗಳು ನಾಪತ್ತೆಯಾಗಿರುವ ಬಗ್ಗೆ ಸ್ಪಷ್ಟನೆ ಕೇಳಿದರು. ಅಧಿಕಾರಿಗಳಿಬ್ಬರು ನೀಡಿದ ಉತ್ತರದಿಂದ ಆಕ್ರೋಶಗೊಂಡ ಜಿಲ್ಲಾಧಿಕಾರಿ, ಆರೋಪಿಗಳೇನು ಪಾಕಿಸ್ತಾನದಲ್ಲಿದ್ದಾರೆಯೇ? ಎಂು ಗದರಿಸಿ, ಈ ವರೆಗೆ ಅವರನ್ನು ಬಂಧಿಸದಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡು, ರಕ್ಷಣಾ ಇಲಾಖೆಗೆ ಮಾಹಿತಿ ನೀಡಿ ಅವರು ಹುಡುಕಿ ಕೊಡುತ್ತಾರೆ ಎಂದರು.

ಅಕ್ರಮ ಮದ್ಯ ಮಾರಾಟ, ದಾಸ್ತಾನು, ನಿಯಮ ಉಲ್ಲಂಘಿಸಿದ ವ್ಯಾಪಾರಿಗಳ ವಿರುದ್ಧ ಸಾಲು ಸಾಲು ಕೇಸ್ ಹಾಕಲಾಗಿದೆ. ಆದರೆ, ಆರೋ

ಪಪಟ್ಟಿ ಸಲ್ಲಿಸಿದ ಪ್ರಕರಣಗಳಲ್ಲಿ ಶಿಕ್ಷೆಯಾದ ಪ್ರಕರಣಗಳ ಸಂಖ್ಯೆ ಅತ್ಯಲ್ಪವಾಗಿದೆ ಎಂದು ಪ್ರಶ್ನಿಸಿದರು. ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಆರೋಪಪಟ್ಟಿ ದಾಖಲಿಸಿ, ನ್ಯಾಯಾಲಯಕ್ಕೆ ಸೂಕ್ತ ಸಾಕ್ಷ್ಯಾಧಾರ ನೀಡುವ ಕುರಿತು ಇಲಾಖೆಯ ಅಧಿಕಾರಿಗಳಗೆ ಕಾರ್ಯಾಗಾರ ಏರ್ಪಡಿಸಿ ಮಾಹಿತಿ ನೀಡುವಂತೆ ಕಿವಿಮಾತು ಹೇಳಿದರು. ವಿವಿಧ ದಾಳಿಯ ವೇಳೆ ವಶಕ್ಕೆ ಪಡೆದ ಮದ್ಯಗಳನ್ನು ನಾಶಪಡಿಸುತ್ತಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರಕಾರದ ಆದೇಶದಂತೆ ದಾಳಿಯ ವೇಳೆ ವಶಕ್ಕೆ ಪಡೆದ ಮದ್ಯಗಳನ್ನು ನಾಶಪಡಿಸುತ್ತಿರುವುದಾಗಿ ಅಧಿಕಾರಿಗಳು ಸ್ಪಷ್ಟನೆ ನೀಡಿದರು. ಪ್ರಸ್ತುತ ನಾಶ ಪಡಿಸುತ್ತಿರುವ ಮದ್ಯದ ಬಾಟಲಿಗಳು ಕಲಬೆರಕೆ ಮದ್ಯ ಮಾರಾಟಗಾರರ ಕೈಗೆ ಸಿಗದಂತೆ ಎಚ್ಚರವಹಿಸಬೇಕು ಎಂದು ಸೂಚಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News