ಸಂಚಾರ ನಿಯಮ ಉಲ್ಲಂಘನೆ: 1,022 ಪ್ರಕರಣ

Update: 2016-08-02 16:52 GMT

ಶಿವಮೊಗ್ಗ, ಆ. 2: ಶಿವಮೊಗ್ಗ ನಗರ ಹಾಗೂ ಜಿಲ್ಲಾದ್ಯಂತ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಚಾಲಕರ ಮೇಲೆ ಕೇಸ್ ದಾಖ ಲಿಸುವ ವಿಶೇಷ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಇಲಾಖೆ ಮುಂದುವರಿಸಿದ್ದು, ಆ. 1 ರಂದು ಒಂದೇ ದಿನ ಸಾವಿರಾರು ಕೇಸ್ ದಾಖಲಿಸಿ ದಂಡ ರೂಪದಲ್ಲಿ ಲಕ್ಷಾಂತರ ರೂ. ವಶಕ್ಕೆ ಪಡೆದು ಕೊಂಡಿದೆ. ಈ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆ ಮಂಗಳವಾರ ಅಂಕಿಅಂಶಗಳ ವಿವರ ಬಿಡುಗಡೆ ಮಾಡಿದ್ದು, ಆ. 1 ರಂದು ಜಿಲ್ಲಾದ್ಯಂತ 1, 022 ಕೇಸ್ ದಾಖಲಿಸಿಕೊಂಡು ದಂಡ ರೂಪದಲ್ಲಿ 1.16 ಲಕ್ಷ ರೂ. ವಶಕ್ಕೆ ಪಡೆದು ಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ. ಮಿತಿ ಮೀರಿದ ವೇಗದ ಸಂಚಾರ, ಹೆಲ್ಮೆಟ್ ಧರಿಸದೆ ಸಂಚಾರ, ಆಟೋ-ಬಸ್‌ಗಳಲ್ಲಿ ನಿಗದಿ ಗಿಂತ ಹೆಚ್ಚಿನ ಪ್ರಯಾಣಿಕರ ಸಾಗಾಟ, ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರು ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕಲು ಹಾಗೂ ಸಂಚಾರ ನಿಯಮ ಗ ಳನ್ನು ಕಟ್ಟುನಿಟ್ಟಾಗಿ ಅನುಷ್ಠಾ ನಗೊಳಿಸುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲಾದ್ಯಂತ ವಿಶೇಷ ಕಾರ್ಯಾಚರಣೆಗಳನ್ನು ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News