×
Ad

ಮುಂಡಗೋಡ ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರಾಬರ್ಟ್ ಲೋಬೊ ಆಯ್ಕೆ

Update: 2016-08-02 22:48 IST

ಮುಂಡಗೋಡ, ಆ.2:ಪ.ಪಂ.ನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಹಿರಿಯ ಸದಸ್ಯ ರಾಬರ್ಟ್ ಲೋಬೊ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಂಗಳವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಾಯಿ ಸಮಿತಿ ಆಧ್ಯಕ್ಷ ಸ್ಥಾನಕ್ಕೆ ರಾಬರ್ಟ್ ಲೋಬೊ ಮಾತ್ರ ನಾಮಪತ್ರ ಸಲ್ಲಿಸಿದ ಕಾರಣದಿಂದ ಅವಿರೋಧವಾಗಿ ಆಯ್ಕೆಯಾದರು.

ಈ ಸಂದರ್ಭ ಪ.ಪಂ. ಅಧ್ಯಕ್ಷ ರಫೀಕ್ ಇನಾಮದಾರ, ಮುಖ್ಯಾಧಿಕಾರಿ ಸಂಗನ ಬಸಯ್ಯ, ಉಪಾಧ್ಯಕ್ಷ ಫಕೀರಪ್ಪ ಅಂಟಾಳ, ಮಾಜಿ ಅಧ್ಯಕ್ಷ ಫಣಿರಾಜ ಹದಳಗಿ, ರಾಮಾಬಾಯಿ ಕುದಳೆ, ಗಂಗಮ್ಮ ಸಿಂದಗಿ ಬಾಯಿ, ಸುಶೀಲಾ ಲಮಾಣಿ, ಮೌನೇಶ್ವರ ಕೊರವರ, ಸಂಜು ಪಿಶೆ, ಅಲ್ಲಿ ಖಾನ ಪಠಾಣ,ಲತೀಫ ನಾಲಬಂದ, ರಾಮಣ್ಣ ಪಾಲೇಕರ, ಮಹ್ಮದ್ ಗೌಸ್ ಮಕಾನದಾರ, ಜೈನೊ ಬೆಂಡಿಗೇರಿ, ಇರ್ಫಾನ ಸವಣೂರ, ಆಸೀಫ್ ಮಕಾನದಾರ ಸೇರಿದಂತೆ ಪ.ಪಂ ಸಿಬ್ಬಂದಿ ವರ್ಗ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಶುಭ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News